
ಕಲಬುರಗಿ: ವಾಲ್ಮೀಕಿ ನಿಗಮದ ಹಗರಣದ ಮೂಲಕ ಕೋಟ್ಯಂತರ ಹಣ ಅವ್ಯವಹಾರ ನಡೆಸಿದ ಬಿ.ನಾಗೇಂದ್ರ ಅವರಿಗೆ ಸಚಿವಸ್ಥಾನ ನೀಡಿದ್ದನ್ನು ಖಂಡಿಸಿ,ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಹಮ್ಮಿಕೊಂಡಿರುವ ಐದನೆಯ ದಿನದ ಸತತ ಧರಣಿ ಸತ್ಯಾಗ್ರಹ ಇಂದು ಅಂತ್ಯಗೊಂಡಿದ್ದು, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಮಾತನಾಡಿದರು. ವಿಶಾಲ್ ದರ್ಗಿ,ಅಪ್ಪು ಕಣಕಿ, ರವಿಚಂದ್ರ ಕಾಂತಿಕರ್,ಶಿವಯೋಗಿ ನಾಗನಹಳ್ಳಿ,ಅವಿನಾಶ ಕುಲಕರ್ಣಿ,ನಾಗರಾಜ, ಮಲ್ಲು ಉದನೂರ,ಅನೀಲ ಜಾಧವ,ಬಂಡೇಶ ತಾರಫೈಲ್,ಅನೀಲಕುಮಾರ ಡಾಂಗೆ,ಶ್ರೀನಿವಾಸ ದೇಸಾಯಿ, ರಾಕೇಶ ವಾಡೇಕರ್ ಅವರು ಸೇರಿದಂತೆ ಹಲವರು ಪಾಲ್ಗೊಂಡರು.































