Home ಜಿಲ್ಲೆ ಕಲಬುರಗಿ 1.07 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

1.07 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಆ.21-ಮನೆಯ ಬಾಗಿಲು ಪಕ್ಕದಲ್ಲಿನ ಮುಂದಿನ ಕಿಟಕಿ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು 1.07 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಕವಲಗಾ (ಬಿ) ಗ್ರಾಮದಲ್ಲಿ ನಡೆದಿದೆ.
ರಿಹಾನಾಬೇಗಂ ದಸ್ತಗೀರಸಾಬ ದಿಡ್ಡಿಮನಿ ಎಂಬುವವರ ಮನೆಯ ಬಾಗಿಲು ಪಕ್ಕದಲ್ಲಿನ ಮುಂದಿನ ಕಿಟಕಿ ಮುರಿದು ಮನೆಯೊಳಗ ನುಸುಳಿರುವ ಕಳ್ಳರು 6 ಗ್ರಾಂ.ಬಂಗಾರದ ಬೋರಮಳ ಸರ, ಒಂದು ಜೊತೆ ಕಿವಿಯೋಲೆ, ಬಂಗಾರದ ಬೂಗಡಿ ಕಡ್ಡಿ, ಲವಂಗಾ ಕಡ್ಡಿ ಸೇರಿ 80 ಸಾವಿರ ರೂ.ಮೌಲ್ಯದ ಚಿನ್ನಾಭರಣ, ಎರಡು ಜೊತೆ ಬೆಳ್ಳಿ ಕಾಲು ಚೈನ, ಬೆಳ್ಳಿಯ ಖಡ್ಗ, ಬೆಳ್ಳಿ ಉಂಗುರ ಸೇರಿ 20 ಸಾವಿರ ರೂ.ಮೌಲ್ಯದ ಬೆಳ್ಳಿ ಸಾಮಾನು ಮತ್ತು 7 ಸಾವಿರ ರೂ.ನಗದು ಸೇರಿ 107000 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಇವರು ಮನೆಗೆ ಬೀಗ ಹಾಕಿಕೊಂಡು ಕುಮ್ಮನ ಶಿರಸಗಿ ಗ್ರಾಮಕ್ಕೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.