
ಬನವಸೆ ದೇಶದ ಆ ಮಾಯೆ ಮುಂದೆ ಅಕ್ಕ ಮಹಾದೇವಿಯಾಗಿ ಬಂದು ಅಲ್ಲಮರ ಅನುಭವ ಮಂಟಪದಲ್ಲಿ ಅಧ್ಯಾತ್ಮದಶಿಖರವನ್ನೇರಿದಳು. ವೀರ ವಿರಾಗಿಣಿ, ವೈರಾಗ್ಯನಿಧಿಯಾಗಿ ಕಂಗೊಳಿಸಿದಳು ಎಂದು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿವರ್ಣಿಸುತ್ತಾನೆ.
ಕಲ್ಯಾಣದ ಶರಣೆ ಮಾತೆ ಅಕ್ಕ ಮಹಾದೇವಿ ಪಾರ್ವತಿ ಪ್ರತಿ ರೂಪ ನೀನುಎಲ್ಲ ಶರಣರ ಬೆಳಗಿದ ತಾಯಿ
ನಾಡಿಗೆ ಸಿರಿದೇವಿಸುಮತಿ ನಿರ್ಮಲರ ಉಡುತಡಿಶಿವಭಕ್ತರ ಮನೆಗೆಪಾರ್ವತಿಯ ಪ್ರತಿರೂಪ ನೀನು ಕಳೆದೆ ಜಗತಾಪ, ನೀನೆ ಜಗದೀಪ ಧರೆಗಿಳಿದರಾ ಬಸವಾದಿ ಪ್ರಮಥರು ಎನ್ನುವ ಗತಿಯಲ್ಲಿ ಚಾಮರಸನು ಶರಣೆ ಅಕ್ಕಮಹಾದೇವಿಯನ್ನು ಸ್ತ್ರೀ ಕುಲದಮುಕುಟಮಣಿ, ಅಪೂರ್ವ ಅನುಭಾವಿ, ಚನ್ನಮಲ್ಲಿಕಾರ್ಜುನಯ್ಯನ ಕದಳಿ ಕಂಡ ದೇವಿ ಎಂದು ಕೊಂಡಾಡಿದ್ದಾರೆ.ಬಲ್ಲವರು ಮಹಿಳೆ ಕುರಿತಾಗಿ ಅತ್ಯಂತ ಅದ್ಭುತ ಚಿಂತನೆಗಳನ್ನುವ್ಯಕ್ತಪಡಿಸಿದ್ದಾರೆ. ಮಾತೃದೇವೋಭವ, ಯತ್ರ ನಾರ್ಯಸ್ತೆ ರಮಂತೆ ಪೂಜ್ಯಂತೆ ಎಂದಿದ್ದಾರೆ.
ಕವಿ ಜಿ.ಎಸ್. ಶಿವರುದ್ರಪ್ಪನವರು ಆಕಾಶದ ದೀಪದಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಅಂದರೆಅಷ್ಟೇ ಸಾಕೆ? ಎಂದು ಬಣ್ಣಸಿದ್ದಾರೆ.ಹೀಗೆ ಚಾಮರಸನ ಪ್ರಭುಲಿಂಗಲೀಲೆ ಬಹಳ ವಿಶಿಷ್ಟ ಕಥನ. ಇದರಿಂದ ಆನಂದ ಅನುಭೂತಿ ದೊರೆಯುತ್ತದೆ. ಶರಣರಸನ್ಮಾರ್ಗದಲ್ಲಿ ನಡೆದ ಜೋಳದ ರಾಶಿ ದೊಡ್ಡನಗೌಡ, ಸಿದ್ಧರಾಮ ಜಂಬಲದಿನ್ನಿ, ಪಂಚಾಕ್ಷರಿ ಗವಾಯಿ ಮುಂತಾದಮಹನೀಯರು ಇಂದಿಗೂ ಸ್ಮರಣೀಯರು.
-ಪೂಜ್ಯ ಮಹಾಂತ ಸ್ವಾಮಿಗಳು, ಮುದಗಲ್































