Home ಸುದ್ದಿ ರಾಷ್ಟ್ರೀಯ ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಅಪರಾಧ: ಸಂತೋಷ್ ಹೆಗ್ಡೆ

ಪ್ರಶ್ನೆಪತ್ರಿಕೆ ಸೋರಿಕೆ ದೊಡ್ಡ ಅಪರಾಧ: ಸಂತೋಷ್ ಹೆಗ್ಡೆ

ಕೆ.ಆರ್.ಪುರ ಜು.29- ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಕೇವಲ ನಿಯಮ ಉಲ್ಲಂಘನೆಯಲ್ಲ, ಅದು ಕಷ್ಟಪಟ್ಟು ಓದುವ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಮಹಾಪರಾಧ ಎಂದು ಮಾಜಿ ಲೋಕಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಗುಡುಗಿದ್ದಾರೆ.
ಮಹದೇವಪುರ ಕ್ಷೇತ್ರದ ಹೂಡಿಯಲ್ಲಿ ಭಾರತೀಯರ ಸೇವಾ ಸಮಿತಿಯ ಪ್ರಾಧನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ಕೃತ್ಯಗಳು ಮುಂದೆಂದೂ ಮರುಕಳಿಸದಂತೆ ತಡೆಯಲು ಅಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.


ಸಚಿವರ ರಾಜೀನಾಮೆಯಿಂದಷ್ಟೇ ಪರಿಹಾರ ಸಿಗದು!
ಪ್ರಶ್ನೆ ಪತ್ರಿಕೆ ಸೋರಿಕೆಯಾದ ತಕ್ಷಣ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡುವುದು ನೈತಿಕ ಹೊಣೆಗಾರಿಕೆಯಾಗಿದರೂ, ಅದೊಂದೇ ಈ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗುವುದಿಲ್ಲ. ಈ ಜಾಲದ ಹಿಂದಿರುವ ಕಿಂಗ್‍ಪಿನ್‍ಗಳು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳನ್ನು ಮೂಲಸಮೇತ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರಿಗೆ ತೊಂದರೆಯಾದಾಗ ಅಥವಾ ಅನಾಹುತಗಳು ಸಂಭವಿಸಿದ ಮೇಲಷ್ಟೇ ಎಚ್ಚೆತ್ತುಕೊಳ್ಳುವ ಧೋರಣೆಯನ್ನು ಬಿಟ್ಟು, ಮುನ್ನೆಚ್ಚರಿಕಾ ಕ್ರಮವಾಗಿ ಪಾದಚಾರಿ ಮಾರ್ಗಗಳನ್ನು ಮೊದಲೇ ತೆರವುಗೊಳಿಸಿದರೆ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿರುವವರಿಗೂ ತೊಂದರೆಯಾಗುತ್ತಿರಲಿಲ್ಲ.
ಸರ್ಕಾರ ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ದೇವನಹಳ್ಳಿ ತಾಲ್ಲೂಕಿನ ಬಸವಕಲ್ಯಾಣ ಬಸವ ಮಠದ ಡಾ.ಮಹದೇವಸ್ವಾಮಿಜೀ, ಭಾರತೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹೂಡಿ ರಾಮಚಂದ್ರ, ಮುಖಂಡರಾದ ಯುವಶಕ್ತಿ ಸೂರಿ,ಜಿ.ಅನಂದ್ , ಪ್ರಶಾಂತ್ ಚಕ್ರವರ್ತಿ,ಅಮರ್, , ಮಹೇಶ್, ಶ್ರೀನಿವಾಸ್, ವೆಂಕಿ ಉಪಸ್ಥಿತರಿದ್ದರು.