ಕಲಬುರಗಿ: ಆಷಾಢ ಮಾಸದ ಹುಣ್ಣಿಮೆ ಪ್ರಯುಕ್ತ ನಗರದ ಬ್ರಹ್ಮಪುರ ದೇಶಮುಖವಾಡಾದ ಆವರಣದಲ್ಲಿ ಇಂದು ರುಕ್ಮಿಣಿ ಪಾಂಡುರಂಗ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ಆಷಾಢ ಏಕಾದಶಿಯಿಂದ ಹುಣ್ಣಿಮೆಯವರೆಗೆ ದೇಶಮುಖರವಾಡಾದಲ್ಲಿ ಜರುಗಿದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಭಾಗವಾಗಿ ನಡೆದ ಇಂದಿನ ರಥೋತ್ಸವದಲ್ಲಿ ಹಲವಾರು ಭಕ್ತರು ಪಾಲ್ಗೊಂಡರು.