ಕಲಬುರಗಿ: ಕಾನೂನು ಬಾಹಿರವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‍ಗಳನ್ನು ಹಿಡಿದು ಹಣ ಪಡೆದು ರಸೀದಿ ನೀಡದೆ ಇರುವ ಆರ್‍ಟಿಓ ಇನ್ಸಪೆಕ್ಟರ್‍ನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಟಿಪ್ಪರ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತರ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಜಗನ್ನಾಥ ದೇಸಾಯಿ, ಮೊಹ್ಮದ್ ಹನೀಫ್ ಶೇಖ್, ಇಕ್ಬಾಲ್ ಪಟೇಲ್, ಇರ್ಷಾದ್ ಪಟೇಲ್, ಮೊಹ್ಮದ್ ಆರೀಫ್ ಅಲಿ, ಆನಂದ ರಾಧಡೆ, ಪ್ರಭು ಗುಬ್ಬರ, ಬಂಡಪ್ಪ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.