Home ಜಿಲ್ಲೆ ಕಲಬುರಗಿ ಅಪಘಾತ: ಬೈಕ್ ಸವಾರ ಸಾವು

ಅಪಘಾತ: ಬೈಕ್ ಸವಾರ ಸಾವು

ಜೇವರಗಿ,ಜು 28: ತಾಲ್ಲೂಕಿನ ಗಂವ್ಹಾರ ಗ್ರಾಮದ ಹತ್ತಿರ ನಿರ್ಮಾಣ ಹಂತದಲ್ಲಿರುವ ಚೆನೈ-ಸೂರತ್ ಹೆದ್ದಾರಿಯಲ್ಲಿ ಸೋಮವಾರ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆಯ ಶಿರವಾಳ ಗ್ರಾಮದ ಹಣಮಂತ ತಾಯಪ್ಪ ಕಂಬದ (30) ಮೃತಪಟ್ಟಿದ್ದು, ಹಿಂಬದಿ ಸವಾರ, ಗಂವ್ಹಾರ ಗ್ರಾಮದ ಸಾಯಬಣ್ಣ ದತ್ತಪ್ಪ ತಳವಾರ (30) ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗೆ ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್‍ಐ ಗಜಾನಂದ ಬಿರಾದಾರ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ