Home ಜಿಲ್ಲೆ ಕಲಬುರಗಿ ಉದ್ಯೋಗ ಖಾತ್ರಿ ಬಾಕಿ ವೇತನ ಪಾವತಿಗೆ ಆಗ್ರಹ

ಉದ್ಯೋಗ ಖಾತ್ರಿ ಬಾಕಿ ವೇತನ ಪಾವತಿಗೆ ಆಗ್ರಹ

ಜೇವರಗಿ,ಅ.14: ಇಜೇರಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ಸುಮಾರು, 7 ವಾರಗಳ ಕಾಲ ಕನಿಷ್ಠ ಮೂರು ತಿಂಗಳಿಂದ ಕೆಲಸ ಮಾಡಿದ್ದಾರೆ.ಆದರೆ ಇನ್ನೂವರೆಗೂ ದುಡಿದ ಕೂಲಿ ಹಣ ಕೊಡದೆ ಸರಕಾರ ಬಾಕಿ ಉಳಿಸಿಕೊಂಡಿದೆ ಎಂದು ಕಮ್ಮೂನಿಷ್ಟ್ ಪಾರ್ಟಿ ತಾಲೂಕು ಅಧ್ಯಕ್ಷ ಸುಭಾಷ್ ಹೊಸಮನಿ ಹೇಳಿದ್ದಾರೆ. ಈ ಕುರಿತು ಗ್ರಾಪಂ ಮನವಿ ಸಲ್ಲಿಸಿದ ಅವರು ಬಡರೈತರು ಕೃಷಿ ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಉಪಜೀವನ ನಡೆಸುವುದಕ್ಕಾಗಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದರೂ ಕೂಲಿ ಹಣ ಕೊಡದೆ ಇರುವದರಿಂದ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ.ರೈತರು ಭೂಮಿಗೆ ಬಿತ್ತಿರುವ ,ಬೀಜ ಗೊಬ್ಬರ ಕಳೆನಾಶಕ ಇನ್ನಿತರ ಎಲ್ಲಾ ಖರ್ಚುಗಳು ಮಾಡಿರುವುದನ್ನು ಮಣ್ಣು ಪಾಲು ಆಗಿರುತ್ತವೆ.ಇದರಿಂದ ರೈತರು ಕಷ್ಟಕ್ಕೆ ಗುರಿಯಾಗಿ ರೈತರ ಭೂಮಿಯಲ್ಲಿ ಯಾವುದೇ ಕೆಲಸಗಳು ಸಿಗುತ್ತಿಲ್ಲ ಆದರಿಂದ ಪರ್ಯಾಯ ಕೆಲಸವಾಗಿ ಉದ್ಯೋಗ ಖಾತ್ರಿಯಲ್ಲಿ ದುಡಿದರೂ ಕೂಲಿ ಹಣ ಸಿಗುತ್ತದೆ ಎನ್ನುವ ಭರವಸೆ ನೀರು ಪಾಲಾಗಿದೆ ಎಂದಿದ್ದಾರೆ.
ಈ ಮನವಿ ಪತ್ರಕ್ಕೆ ಸರ್ಕಾರ ಸ್ಪಂದನೆ ಮಾಡದಿದ್ದರೆ ಒಂದು ವಾರಗಳ ಕಾಲಾವಕಾಶ ಕೊಟ್ಟು ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಿದ್ದಣ್ಣ ಮ್ಯಾಗೇರಿ
ಸಕ್ರಪ್ಪ ನಡುವಿನಕೆರೆ ಸೇರಿದಂತೆ ಅನೇಕರು ಇದ್ದರು