Home Lead News ಸಿಜೆಪಿ ಮುಖಂಡರಿಗೆ ಜೈಲು

ಸಿಜೆಪಿ ಮುಖಂಡರಿಗೆ ಜೈಲು

ನವದೆಹಲಿ.ಅ೧೪: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸಲು ನಿಷೇಧಿತ ಪ್ರದೇಶವಾದ ಜಂತರ್ ಮಂತರ್‌ಗೆ ನುಗ್ಗಲು ಯತ್ನಿಸಿದ ‘ಕಾಕ್ರೋಚ್ ಜನತಾ ಪಾರ್ಟಿ’ಯ (ಸಿಜೆಪಿ) ಪ್ರಮುಖ ಮುಖಂಡರಾದ ಸೌರವ್ ದಾಸ್ ಮತ್ತು ಅಶೋತ್ ರಾಂಕಾ ಅವರಿಗೆ ದೆಹಲಿ ನ್ಯಾಯಾಲಯವು ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮಂದಿರ್ ಮಾರ್ಗ್‌ನ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಸಿಜೆಐ ಮುಖಂಡರನ್ನು ಹಾಜರುಪಡಿಸಿದ ಬಳಿಕ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. ದೆಹಲಿಯಲ್ಲಿ ಜಂತರ್ ಮಂತರ್ ಪ್ರದೇಶವನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟು, ಅಲ್ಲಿ ಸಾರ್ವಜನಿಕ ಸಭೆ-ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.
ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶೋತ್ ರಾಂಕಾ ಹಾಗೂ ಅಜಿಂಕ್ಯ ಶಿಂಧೆ ನೇತೃತ್ವದ ಕಾರ್ಯಕರ್ತರು ನಿಯಮವನ್ನು ಗಾಳಿಗೆ ತೂರಿ ಗೇಟ್ ಹತ್ತಿ ಜಂತರ್ ಮಂತರ್ ಒಳಗೆ ನುಗ್ಗಿದ್ದರು. ಅಲ್ಲದೆ, ತ್ರಿವರ್ಣ ಧ್ವಜ ಹಿಡಿದು “ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು” ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದರು.

ಈ ಹಿಂದೆ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜಾಮೀನು ಪಡೆದಿದ್ದ ಸಂದರ್ಭದಲ್ಲಿ, ಸಾರ್ವಜನಿಕ ಶಾಂತಿ ಕದಡುವ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಮುಖಂಡರು ಮುಚ್ಚಳಿಕೆ (ಬಾಂಡ್) ಬರೆದುಕೊಟ್ಟಿದ್ದರು. ಆದರೆ, ಇದೀಗ ನಿಷೇಧಿತ ಜಂತರ್ ಮಂತರ್‌ಗೆ ಅತಿಕ್ರಮವಾಗಿ ಪ್ರವೇಶಿಸುವ ಮೂಲಕ ಅವರು ಆ ಬಾಂಡ್‌ನ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಇದೇ ಪ್ರಕರಣದಲ್ಲಿ ಜೊತೆಗಿದ್ದ ಮತ್ತೊಬ್ಬ ಸಿಜೆಪಿ ಮುಖಂಡ ಅಜಿಂಕ್ಯ ಶಿಂಧೆ ಅವರನ್ನು ೫,೦೦೦ ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಮುಂದಿನ ಒಂದು ವರ್ಷದವರೆಗೆ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂಬಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮತ್ತೊಂದೆಡೆ, ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪಕೆ, “ಪ್ರತಿಭಟನೆಯ ಹಕ್ಕನ್ನು ಯಾರೂ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದು, ಪಕ್ಷದ ಮುಖಂಡರಿಗೆ ಕಾನೂನು ನೆರವು ನೀಡಲು ವಿಳಂಬ ಮಾಡಲಾಗಿದೆ ಎಂದು ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಆರೋಪಿಸಿದ್ದಾರೆ.


ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭೀಜಿತ್ ದೀಪ್ಕೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿರುದ್ಧ ಸಾಮಾಜಿಕ ಜಾಲತಾಣ ’ಘಿ’ ನಲ್ಲಿ ತೀವ್ರ ವೀರೋಧ ವ್ಯಕ್ತಪಡಿಸಿದ್ದಾರೆ. “ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇ ಸೌರವ್ ಮತ್ತು ಆಶುತೋಷ್ ಮಾಡಿದ ಏಕೈಕ ತಪ್ಪೇ ಸರ್ಕಾರದ ವಿರೋಧಿ ಧ್ವನಿಯನ್ನು ಅಡಗಿಸಲು ಬಯಸಿದ್ದರೆ ಹಿಂಬಾಗಿಲ ತಂತ್ರಗಳನ್ನು ಬಳಸದೆ ಅಧಿಕೃತವಾಗಿ ದೇಶದಲ್ಲಿ ’ತುರ್ತು ಪರಿಸ್ಥಿತಿ’ ಘೋಷಿಸುವ ಧೈರ್ಯ ತೋರಿಸಿ.”ಅಭೀಜಿತ್ ದೀಪ್ಕೆ, ಸವಾಲು ಹಾಕಿದ್ದಾರೆ.

ಸಿಜೆಪಿ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಮಾತನಾಡಿ, “ಪೊಲೀಸರು ನಿನ್ನೆ ಬೆಳಗಿನ ಜಾವ ೩ ಗಂಟೆಗೆ ಖಾಸಗಿ ವಾಹನದಲ್ಲಿ ನಾಯಕರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇಡೀ ದಿನ ವಕೀಲರೊಂದಿಗೆ ಭೇಟಿಯಾಗಲು ಅವಕಾಶ ನೀಡದೆ ಕಾನೂನುಬಾಹಿರವಾಗಿ ಬಂಧನದಲ್ಲಿಡಲಾಗಿತ್ತು. ದೌರ್ಜನ್ಯದ ಹೊರತಾಗಿಯೂ ನಮ್ಮ ನಾಯಕರ ಹೋರಾಟದ ಹಮ್ಮಸ್ಸು ಕುಗ್ಗಿಲ್ಲ” ಎಂದು ತಿಳಿಸಿದ್ದಾರೆ. ಇದಲ್ಲದೆ, ರಾಷ್ಟ್ರ ರಾಜಧಾನಿಯ ರಾಜಕೀಯ ಕೇಂದ್ರಭಾಗವಾದ ಜಂತರ್ ಮಂತರ್‌ನಿಂದ ಪ್ರತಿಭಟನಾ ಸ್ಥಳವನ್ನು ದೂರಕ್ಕೆ ಸ್ಥಳಾಂತರಿಸುವುದು ಪ್ರಜಾಸತ್ತಾತ್ಮಕ ಹೋರಾಟದ ಧ್ವನಿಯನ್ನು ಹತೋಟಿ ಮಾಡುವ ಹುನ್ನಾರವಾಗಿದೆ ಎಂದು ಸಿಜೆಪಿ ಆರೋಪಿಸಿದೆ.

ಸಿಜೆಪಿ ನಾಯಕರಿಗೆ ಜೈಲು ರಾಹುಲ್ ಕಿಡಿ


ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಕಾಕ್‌ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಜೈಲಿಗೆ ಕಳುಹಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ
ಖಂಡಿಸಿದ್ದಾರೆ.


ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯ ಎಂದು ಅವರು ಅವರು ಕಿಡಿಕಾರಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಅಪರಾಧವಲ್ಲ, ಯುವಕರ ಜೈಲಿಗೆ ಕಳುಹಿಸಿದ್ದು ಹೇಡಿತನದ ಕೃತ್ಯ: ರಾಹುಲ್ ಗಾಂಧಿ
ನವದೆಹಲಿ, ಅ.೧೪: ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಕಾಕ್‌ರೋಚ್ ಜನತಾ ಪಾರ್ಟಿ (ಅಎP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಜೈಲಿಗೆ ಕಳುಹಿಸಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯ ಎಂದು ಅವರು ಟೀಕಿಸಿದ್ದಾರೆ.


ಸಿಜೆಪಿ ಪ್ರತಿಭಟನೆ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.


ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಅಪರಾಧವಲ್ಲ. ಇದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯಎಂದು ರಾಹುಲ್ ಗಾಂಧಿ ಹೇಳಿದ್ದಾರೆ.