
ಕಲಬುರಗಿ,ಅ.13-ನಗರದ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಾನಿ ನಗರದ ಪೂಜಾರಿ ಕಮಾನ್ ಹಿಂದುಗಡೆ ಇರುವ ಶಿವಲಿಂಗೇಶ್ವರ ದೇವಸ್ಥಾನ ಹತ್ತಿರವಿರುವ ಪ್ರಭುಲಿಂಗ ಪಪ್ಪಾ ಅವರ ಮನೆಯ ಹಾಲಿನಲ್ಲಿ ಕೆಲವರು ಅಕ್ರಮವಾಗಿ ಜೂಜಾಟವಾಡುತ್ತಿದ್ದಾರೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಅಶೋಕ, ರಾಜಕುಮಾರ, ರಾಜಕುಮಾರ ಚೌಧರಿ, ಸೈಯ್ಯದ್ ತೌಸಿಫ್ ಹುಸೇನ್, ಶಿವಲಿಂಗ, ಪ್ರದೀಪ್, ನಾಗರಾಜ ಮತ್ತು ಸುಭಾಷ ಅವರು ದಾಳಿ ನಡೆಸಿ 10 ಜನರನ್ನು ಬಂಧಿಸಿದ್ದಾರೆ.
ಪ್ರಭುಲಿಂಗ ಪಪ್ಪಾ, ಕಿಶೋರ ವೈಚಾಳಿ, ಶಿವಪುತ್ರ ಪೂಜಾರಿ, ಶಿವಕುಮಾರ ಅವರಾದಿ, ಶರಣರೆಡ್ಡಿ ಭಂಡಿ, ಬಸವರಾಜ ಕಂಠಿ, ರಾಜೇಂದ್ರ ಪಾಟೀಲ, ಮಲ್ಲಿಕಾರ್ಜುನ ಜಾಜಿ, ಸಂಗಮೇಶ ನೂದ್ನೂರ್, ಸಿದ್ರಾಮಪ್ಪ ಗುತ್ತಿ ಎಂಬುವವರನ್ನು ಬಂಧಿಸಿ 17,440 ರೂ.ನಗದು, 7 ಮೊಬೈಲ್ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























