ಕಲಬುರಗಿ: ನಗರದ ಡಾ.ಎಸ್.ಎಂ ಪಂಡಿತರಂಗಮಂದಿರದಲ್ಲಿಂದು ಜಿಲ್ಲಾಡಳಿತ,ಭಾರತ ಸೇವಾದಳ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ರೀ ಅವರ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ,ಪ್ರಬಂಧಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸರ್ವಧರ್ಮ ಪ್ರಾರ್ಥನೆ ಜರುಗಿತು. ವಿವಿಧ ಧರ್ಮಗುರುಗಳು,ಜಿಲ್ಲಾಧಿಕಾರಿ ಇಕ್ರಂ ಶರೀಫ್, ಎಡಿಸಿ ರಾಯಪ್ಪ ಹುಣಸಗಿ, ಜಿಪಂ ಸಿಇಒ ರಾಹುಲ ಸಂಕನೂರ,ಪಾಲಿಕೆ ಆಯುಕ್ತ ಅವಿನಾಶ ಸಿಂಧೆ, ವಾರ್ತಾಧಿಕಾರಿ ಜಡಿಯಪ್ಪ ಗೆದ್ಲಗಟ್ಟಿ,ಡಾ.ಚಿ.ಸಿ ನಿಂಗಣ್ಣ, ಸುರೇಶ ಬಡಿಗೇರ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.