Home ಜಿಲ್ಲೆ ಕಲಬುರಗಿ 11 ಮಂದಿಗೆ ಉಚಿತ ಯಶಸ್ವಿ ಶಸ್ತ್ರ ಚಿಕಿತ್ಸೆ

11 ಮಂದಿಗೆ ಉಚಿತ ಯಶಸ್ವಿ ಶಸ್ತ್ರ ಚಿಕಿತ್ಸೆ

ಕಲಬುರಗಿ,ಅ.2-ಗ್ರಾಮೀಣ ಹಾಗೂ ಅಗತ್ಯವಿರುವ ಜನರಿಗೆ ಗುಣಮಟ್ಟದ ನೇತ್ರ ಆರೈಕೆಯನ್ನು ತಲುಪಿಸುವ ಉದ್ದೇಶದಿಂದ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ವತಿಯಿಂದ ಹಾಗೂ ಹಮಾರಾ ಬಂಧನ್ e.ಗಿ., ಜರ್ಮನಿ ಸಂಸ್ಥೆಯ ಸಹಯೋಗದಲ್ಲಿ ವಿ.ಕೆ. ಸಲಗರ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.
ಶಿಬಿರದಲ್ಲಿ ಒಟ್ಟು 121 ಜನರನ್ನು ತಪಾಸಣೆ ಮಾಡಲಾಗಿದ್ದು, ಅವರಲ್ಲಿ 19 ಜನರಲ್ಲಿ ಕಣ್ಣಿನ ಪೆÇರೆ (ಕ್ಯಾಟರಾಕ್ಟ್) ಪತ್ತೆಯಾಯಿತು. ತಪಾಸಣೆಯ ನಂತರ ಶಸ್ತ್ರಚಿಕಿತ್ಸೆಗೆ ಶಸ್ತ್ರಚಿಕಿತ್ಸೆಗೆ ಸಮ್ಮತಿಸಿದ 11 ಮಂದಿಯನ್ನು ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಗೆ ಕರೆತಂದು ಅಗತ್ಯ ಪರೀಕ್ಷೆಗಳನ್ನು ನಡೆಸಿ ಯಶಸ್ವಿಯಾಗಿ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆ ಮಾಡಲಾಯಿತು.