Home ಜಿಲ್ಲೆ ಕಲಬುರಗಿ 1.47 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

1.47 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಅ.1-ಮನೆ ಬಾಗಿಲು ಕೊಂಡಿ ಮುರಿದು 1.47 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ನಗರದ ಎಸ್.ಎಂ.ಕೃಷ್ಣ ಕಾಲೋನಿಯಲ್ಲಿ ನಡೆದಿದೆ.
ಅಂಬಿಕಾ ಮೊಹ್ಮದ್ ಆಸೀಫ್ ಎಂಬುವವರ ಮನೆ ಬಾಗಿಲು ಕೊಂಡಿ ಮುರಿದು 40 ಸಾವಿರ ರೂ.ಮೌಲ್ಯದ 8 ಗ್ರಾಂ.ಬಂಗಾರದ ಲಾಕೆಟ್, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಉಂಗುರ, 25 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಕಿವಿಯೋಲೆ, 10 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಉಂಗುರ, 7,500 ರೂ.ಮೌಲ್ಯದ ಬೆಳ್ಳಿಯ ಕಾಲುಚೈನ ಮತ್ತು ಮಕ್ಕಳ ಹಾಲಗಡಗ, 40 ಸಾವಿರ ರೂ.ನಗದು ಸೇರಿ 1,47,500 ರೂ.ಮೌಲ್ಯದ ನಗನಾಣ್ಯ ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇವರು ಕುಟುಂಬದೊಂದಿಗೆ ತವರು ಮನೆಯಾದ ಬಿದನೂರ ಗ್ರಾಮಕ್ಕೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.