Home ಜಿಲ್ಲೆ ತುಮಕೂರು ವೃಭವದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ವೃಭವದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ತಿಪಟೂರು, ಸೆ. ೩- ನಗರದ ಕೋಟೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಯರ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.


ಮೊದಲ ದಿನ ಪೂರ್ವಾರಾಧನೆ ಎರಡನೇ ದಿನ ಮದ್ಯಾಹ್ರಾಧನೆ ಕಡೆ ದಿವಸ ಉತ್ತರ ಆರಾಧನೆ ನೆರವೇರಿತು.


ಪ್ರಧಾನ ಅರ್ಚಕರಾದ ಮಧುಸೂದನ್ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ಕನಕ ಅಭಿಷೇಕ ಹಾಗೂ ಪಾದಪೂಜೆ ಜರುಗಿತು. ನಂತರ ರಾಜ ಬೀದಿಗಳಲ್ಲಿ ಗುರು ರಾಘವೇಂದ್ರರ ಮೆರವಣಿಗೆಯನ್ನು ನಡೆಸಲಾಯಿತು.


ಈ ಸಂದರ್ಭದಲ್ಲಿ ಶಾಸಕರಾದ ಕೆ. ಷಡಕ್ಷರಿ, ಟ್ರಸ್ಟ್ ಅಧ್ಯಕ್ಷರಾದ ಶ್ರೀಕಾಂತ್, ಕಾರ್ಯದರ್ಶಿಗಳಾದ ಪ್ರಶಾಂತ್ ಚಾತ್ರ, ಮಧುಸೂದನ್ ಕಶ್ಯಪ್ ಮತ್ತು ಶ್ರೀ ಮಠದ ಪ್ರಮುಖರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. ಆರಾಧನಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ರಾಘವೇಂದ್ರರ ದರ್ಶನ ಪಡೆದು ಪುನೀತರಾದರು. ಭಕ್ತಾದಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.