
ಗದಗ,ಆ೩: ಜಾಗತಿಕವಾಗಿ ಪ್ರತಿ ವರ್ಷ ೫೦ ಲಕ್ಷಕ್ಕೂ ಹೆಚ್ಚು ಜನರನ್ನ ಬಾಧಿಸಿ ಬಲಿ ಪಡೆಯುವ ಅತಿಸಾರದಿಂದ ರಕ್ಷಿಸುವ ಒ .ಆರ್. ಎಸ್ ಮಕ್ಕಳಿಂದ ಮುದುಕರವರೆಗೂ ಪ್ರಾಣ ಉಳಿಸುವಲ್ಲಿ ಸಂಜೀವಿನಿಯAತೆ ಕೆಲಸ ಮಾಡುವ ಇದು ಸರಳ ಚಿಕಿತ್ಸಾ ಪದ್ಧತಿಯಾಗಿದ್ದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟçಗಳಿಗೆ ಸಿಕ್ಕ ಹಾಗೂ ಮನುಕುಲ ಸಂರಕ್ಷಣೆಯ ಸಂಜೀವಿನಿಯಾಗಿದೆ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಹೇಳಿದರು.
ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯವು ನಗರ ಆರೋಗ್ಯ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ನಗರ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಒ .ಆರ್. ಎಸ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಒ. ಆರ್. ಎಸ್ ಮಹತ್ವ ಕುರಿತು ಉಪನ್ಯಾಸವನ್ನು ನೀಡುತ್ತಾ ಮೇಲಿನಂತೆ ಮಾತನಾಡಿದರು. ಮುಂದುವರೆದು ಮಾತನಾಡಿದ ಡಾ. ಗಡಾದವರು ಅತಿಸಾರವಾದಾಗ ಹೆಚ್ಚಿನ ಪ್ರಮಾಣದಲ್ಲಿ ಓ ಆರ್ ಎಸ್ ದ್ರಾವಣ ಕುಡಿಸುವುದು ಔಷಧಕ್ಕಿಂತಲೂ ಹೆಚ್ಚು ಮುಖ್ಯವಾಗಿದ್ದು ಇದು ಅತ್ಯಂತ ಸರಳ ವಿಧಾನ ಇದನ್ನ ಜನರು ಅರಿತು ಅತಿಸಾರದಿಂದ ಆರಂಭದ ಹಂತದಲ್ಲಿ ಇದನ್ನು ಪಡೆದಲ್ಲಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಾಪಾಡಿಕೊಳ್ಳಬಹುದಾಗಿದೆ. ಆರೋಗ್ಯ ಇಲಾಖೆಯು ಉಚಿತವಾಗಿ ನೀಡುವ ಒ ಆರ್ ಎಸ್ ಪೊಟ್ಟಣಗಳು ಲಭ್ಯವಾಗದಿದ್ದ ಪಕ್ಷದಲ್ಲಿ ಮನೆಯಲ್ಲಿಯೇ ಅಡುಗೆ ಉಪುö್ಪ ಅಡಿಗೆ ಸೋಡಾ ಸಕ್ಕರೆ ಲಿಂಬೆಹಣ್ಣು ಹಾಗೂ ಕುದಿಸಿ ಆರಿಸಿ ಸೋಸಿದ ನೀರಿನಿಂದ ಈ ಜೀವ ಜಲವನ್ನ ತಯಾರಿಸಬಹುದೆಂಬುದನ್ನ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹೇಶ ಕೊಪ್ಪಳ್ ಅವರು ಮಾತನಾಡಿ ನಮ್ಮ ದೇಶದಲ್ಲಿ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡ ೧೫ ರಷ್ಟು ಇದ್ದು, ಹೆಚ್ಚಾಗಿ ಮಕ್ಕಳನ್ನು ಬಾಧಿಸುವ ಅತಿಸಾರ ಅಪೌಷ್ಟಿಕತೆಗೆ ಇರುವ ಸರಿಯಾದ ಚಿಕಿತ್ಸೆ ಒ ಆರ್ ಎಸ್ ಆಗಿದೆ ಎಂದರು.
ಜಿಮ್ಸ್ ಕಾಲೇಜಿನ ತರಬೇತಿ ವೈದ್ಯರಾದ ಡಾ. ಸ್ಫೂರ್ತಿ ಹೊಂಬಾಳೆ ಡಾ. ಸೌಜನ್ಯ ವೇದಿಕೆ ಮೇಲೆ ಆಸೀನರಾಗಿದ್ದರು ಕಾರ್ಯಕ್ರಮದಲ್ಲಿ ಡಾ. ಭೀಮಪ್ಪ ಹಜಾರೆ ಡಾ. ಭದ್ರಾ ಜಿ. ಜಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶ್ರೀಮತಿ ಆರ್ ಆರ್ ಕಲಾಲ್ ಶ್ರೀಮತಿ ಎಸ್ ವಿ ಅಂಬಿಗೇರ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .ಆರಂಭದಲ್ಲಿ ಆರೋಗ್ಯ ನಿರೀಕ್ಷನಾಧಿಕಾರಿ ಚೇತನ್ ಕರಣಿ ಅವರು ಸರ್ವರನ್ನು ಸ್ವಾಗತಿಸಿದರು .ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಸಿ. ಹುಲಿಗೆಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

































