ಕಲಬುರಗಿ: ಮಹಾನಗರ ಪಾಲಿಕೆ ಮತ್ತು ಪೌರಾಡಳಿತ ನಿರ್ದೇಶನಾಲಯವು ಉಪಧನ ಪಾವತಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ವೀರಭದ್ರ ಸಿಂಪಿ, ಕಾರ್ಯದರ್ಶಿ ಶಿವಾಜಿ ಜಮಾದಾರ, ಶ್ರೀಕಾಂತ ಶೆಟ್ಟಿ, ಸಿದ್ದಪ್ಪ ದಶ್ಮಾ, ಸಿದ್ರಾಮ ಕರಣಿಕ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.