
ಕಲಬುರಗಿ: ರೈತರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಅಪಾಯಕಾರಿ ಪಾರ್ಥೇನಿಯಂ ಕಳೆಯನ್ನು ಜೈವಿಕ ವಿಧಾನದ ಮೂಲಕ ಶಾಶ್ವತವಾಗಿ ನಿರ್ಮೂಲನೆ ಮಾಡಲು ಮೆಕ್ಸಿಕನ್ ಜೀರುಂಡೆ’ಗಳು (Zಥಿgogಡಿಚಿmmಚಿ biಛಿoಟoಡಿಚಿಣಚಿ) ಯಶಸ್ವಿ ಅಸ್ತ್ರವಾಗಿ ಹೊರಹೊಮ್ಮಿವೆ.
ರಾಸಾಯನಿಕಗಳ ಬಳಕೆಯಿಲ್ಲದೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಕಳೆ ಗಿಡಗಳನ್ನು ನಿಯಂತ್ರಿಸಲು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ಇಲಾಖೆ ಈ ಜೀರುಂಡೆಗಳ ಬಳಕೆಗೆ ಉತ್ತೇಜನ ನೀಡುತ್ತಿದ್ದಾರೆ.
ಗಿಡಗಳನ್ನು ಜೀರುಂಡೆಗಳು ನಾಶಪಡಿಸುವುದು ಹೇಗೆ ?
ಈ ಜೀರುಂಡೆಗಳ ಪ್ರೌಢ ಕೀಟಗಳು ಮತ್ತು ಅವುಗಳ ಮರಿಹುಳುಗಳು (ಕೀಡೆ) ಪಾರ್ಥೇನಿಯಂ ಗಿಡದ ಎಲೆಗಳು, ಮೃದುವಾದ ಕಾಂಡ ಹಾಗೂ ಚಿಗುರುಗಳನ್ನು ಪ್ರಮುಖ ಆಹಾರವಾಗಿ ಸೇವಿಸುತ್ತವೆ. ದ್ಯುತಿಸಂಶ್ಲೇಷಣೆಗೆ ಬ್ರೇಕ್: ಇವುಗಳು ಗಿಡದ ಹಸಿರು ಎಲೆಗಳನ್ನು ಸಂಪೂರ್ಣವಾಗಿ ತಿಂದು ಮುಗಿಸುವುದರಿಂದ, ಸಸ್ಯಗಳಿಗೆ ಆಹಾರ ತಯಾರಿಸುವ ದ್ಯುತಿಸಂಶ್ಲೇಷಣೆ ಪ್ರಕ್ರಿಯೆ ನಿಂತುಹೋಗುತ್ತದೆ.
ಬೀಜೋತ್ಪತ್ತಿ ನಾಶ: ಆಹಾರ ಸಿಗದೇ ಗಿಡಗಳು ಒಣಗಲಾರಂಭಿಸುತ್ತವೆ. ಇದರಿಂದ ಕಳೆ ಗಿಡಗಳ ಎತ್ತರ, ತೂಕ ಮತ್ತು ಹೂ ಬಿಡುವ ಸಾಮಥ್ರ್ಯ ಸಂಪೂರ್ಣವಾಗಿ ಕ್ಷೀಣಿಸುತ್ತದೆ. ಪರಿಣಾಮವಾಗಿ ಹೊಸ ಬೀಜಗಳು ಸೃಷ್ಟಿಯಾಗದೆ ಕಳೆಯ ಸಂತತಿ ಮುಂದಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತದೆ.
ಕೃಷಿ ಬೆಳೆಗೆ ಹಾನಿಯಿಲ್ಲ (ಪರಿಸರಸ್ನೇಹಿ ಸುರಕ್ಷತೆ) ರೈತರಲ್ಲಿ ಈ ಕೀಟಗಳು ತಮ್ಮ ಮುಖ್ಯ ಬೆಳೆಗಳನ್ನು ತಿನ್ನಬಹುದು ಎಂಬ ಆತಂಕವಿರುವುದು ಸಹಜ. ಆದರೆ, ಈ ಮೆಕ್ಸಿಕನ್ ಜೀರುಂಡೆಗಳು ಕೇವಲ ಪಾರ್ಥೇನಿಯಂ ಗಿಡಗಳನ್ನು ಮಾತ್ರ ತಿನ್ನುವ ವಿಶಿಷ್ಟ ಗುಣ ಹೊಂದಿವೆ. ಇವುಗಳು ಆಹಾರವಿಲ್ಲದೆ ಸತ್ತರೂ ಸಹ ಬೇರೆ ಯಾವುದೇ ಕೃಷಿ ಬೆಳೆಗಳನ್ನಾಗಲಿ, ತರಕಾರಿ ಅಥವಾ ತೋಟಗಾರಿಕಾ ಗಿಡಗಳನ್ನಾಗಲಿ ಮುಟ್ಟುವುದಿಲ್ಲ
ಎಂದು ಕಟ್ಟುನಿಟ್ಟಾದ ಕ್ವಾರಂಟೈನ್ ಮತ್ತು ಪ್ರಯೋಗಾಲಯ ಸಂಶೋಧನೆಗಳಿಂದ ದೃಢಪಟ್ಟಿದೆ. ಹಾಗಾಗಿ ಇವು ಶೇ.100 ರಷ್ಟು ಸುರಕ್ಷಿತವಾಗಿವೆ.
ಸೂಚನೆ: – ಎಲ್ಲಿ ಜಿರುಂಡೆ ಜಾಸ್ತಿ ಪ್ರಮಾಣದಲ್ಲಿ ಇರುತ್ತವೆ ಅಲ್ಲಿಂದ ಅವುಗಳನ್ನು ಒಟ್ಟು ಗೂಡಿಸಿ ಪಾರ್ಥೇನಿಯಂ ಇರುವ ಸ್ಥಳಗಳಲ್ಲಿ ಬಿಡುವುದರಿಂದ ಪಾರ್ಥೇನಿಯಂ ಕಳೆಯನ್ನು ನಿಯಂತ್ರಿಸುತ್ತದೆ.
ಸಮಗ್ರ ಕಳೆ ನಿರ್ವಹಣೆಗೆ ಸಲಹೆ ಈ ಜೀರುಂಡೆಗಳು ಪಾಳು ಭೂಮಿಯಲ್ಲಿ ಕಳೆಯನ್ನು ತಿಂದು ಮುಗಿಸಿದ ನಂತರ, ಆ ಜಾಗದಲ್ಲಿ ಮತ್ತೆ ಪಾರ್ಥೇನಿಯಂ ಬೆಳೆಯದಂತೆ ತಡೆಯಲು ಸ್ಥಳೀಯ ಮತ್ತು ಉಪಯುಕ್ತ ಸಸ್ಯಗಳಾದ ನಾಯಿ ಶೇಂಗಾ (ಅಚಿssiಚಿ ಣoಡಿಚಿ) ಅಥವಾ ಚಂಡುಹೂವಿನ ಗಿಡಗಳನ್ನು ನೆಡಬೇಕು. ಇದು ಪಾರ್ಥೇನಿಯಂ ಕಳೆಯನ್ನು ನೈಸರ್ಗಿಕವಾಗಿ ಸಂಪೂರ್ಣವಾಗಿ ಹತ್ತಿಕ್ಕಲು ಸಹಾಯ ಮಾಡುತ್ತದೆ ಎಂದು ಕೃಷಿ
ವಿಜ್ಞಾನ ಕೇಂದ್ರದ ತಜ್ಞರು ರೈತರಿಗೆ ಕರೆ ನೀಡಿದ್ದಾರೆ.
-ಡಾ.ರಾಜು ಜಿ. ತೆಗ್ಗೆಳ್ಳಿ, ಹಿರಿಯ ವಿಜ್ಞಾನಿ &ಚಿmಠಿ; ಮುಖ್ಯಸ್ಥರು, ಕೃಷಿ ವಿಜ್ಞಾನ






























