ಕಲಬುರಗಿ: ಸೆಂಟ್ರಿಂಗ್ ಕಟ್ಟಡ ಕಾರ್ಮಿಕರ ಸಂಘದ ನೆತೃತ್ವದಲ್ಲಿ ಬೃಹತ ಪ್ರತಿಭಟನೆ ಕೈಗೊಂಡು, ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಸಂಭವಿಸಿದ ವಿದ್ಯುತ ಅವಘಟದಲ್ಲಿ ಕೈಕಾಲು ಕಳೆದು ಕೊಂಡಿರುವ ಇಮಾಮ್ ಪಟೇಲ್ ಎಂ ಮತ್ತು ದಸ್ತಗೀರ ಅಲ್ಲಾವುದ್ದೀನ ಈ ಇಬ್ಬರು ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಅವಘಟಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮಕ್ಕೆ ಕೈಗೊಳ್ಳಲು ಆಗ್ರಹಿಸಿ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು ಸಂಘಟನೆಯ ಅಧ್ಯಕ್ಷ ಅಲ್ಲಉದ್ದಿನ ಮತ್ತು ಶೇಖ ಅಲಿ, ಅಯ್ಯೂಬ ಕೆ, ಅಲ್ತಾಫ್ ಬೇಗ್, ಎಂ.ಇಮ್ಜಿಯಾಜ್, ಸೈಯದ್ ಅಫರೋಜ, ಅಲೀಮ್ ಸೇರಿದಂತೆ ಕಮಲಾಪೂರ ಹಾಗೂ ಸುತ್ತಲಿನ ಗ್ರಾಮದ ಕಟ್ಟಡ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.