
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,19- ನಗರದಲ್ಲಿರುವ ಬಳ್ಳಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಸೊಸೈಟಿ)ಯ ಸುವರ್ಣ ಮಹೋತ್ಸವ ಮತ್ತು ವಾರ್ಷಿಕ ಸಾಮಾನ್ಯ ಸಭೆ ಇಂದು ಇಲ್ಲಿನ ಪರ್ವಾತಿ ನಗರ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸೊಸೈಟಿ ಅಧ್ಯಕ್ಷ ಕೆ.ಪಕ್ಕೀರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪರಿಶೋಧಕ ಸಿ.ಎರ್ರಿಸ್ವಾಮಿ ಸಂಸ್ಥೆಯ ಬೆಳವಣೆಗೆ ಕುರಿತು ಮಾತನಾಡಿದರು.
ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗು ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಈ ಹಿಂದಿನ ಹಿರಿಯ ನಿರ್ದೇಶಕರುಗಳಿಗೆ ಸನ್ಮಾನಿಸಿ ಗೌರವಿಸಲಾಯ್ತು.
ಸಭೆಯಲ್ಲಿ ಉಪಾಧ್ಯಕ್ಷೆ ಶಿಲ್ಪ .ವಿ ನಿರ್ದೇಶಕರುಗಳಾದ ಬಿ.ಕೆ. ಕೆರೆಕೋಡಪ್ಪ, ಜೆ. ಪೊಂಪಾಪತಿ, ಕೆ. ಹಂಪಾವತಿ, ಬಿ. ಶ್ರೀನಿವಾಸರೆಡ್ಡಿ, ಶಾರದಮ್ಮ, ಆಂಜಿನೇಯ, ಕೆ.ಜೆ.ಕಲ್ಪನ, ಎಸ್. ದೊಡ್ಡನಗೌಡ, ಬಿ. ಚಂದ್ರಿಕಾ, ಕೆ. ಶ್ರೀಕಳ, ಬಿಡಿಸಿಸಿ ಬ್ಯಾಂಕ್ ನ ಪ್ರತಿನಿಧಿ ಜೆ. ರವೀಂದ್ರ ಕುಮಾರ್, ಹಾಗು ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಅಮೀನ ಬೇಗಂ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹಾಲಿ ಸೊಸೈಟಿಯಲ್ಲಿ 6929 ಸದಸ್ಯರಿದ್ದು ಮುಂದಿನ ವರ್ಷಕ್ಕೆ 7100 ಮಾಡುವುದು. ಠೇವಣೆಯನ್ನು 36.20 ಕೋಟಿಗೆ ಹೆಚ್ಚಿಸುವುದು. ಸಾಲ ನೀಡಿಕೆಯನ್ನು 33.50 ಕೋಟಿ ನೀಡುವ ಗುರಿಯನ್ನು ಹೊಂದಿದೆ.
ಕಳೆದ ವರ್ಷ 3189 ಸದಸ್ಯರಿಗೆ 33.38 ರ್ಕೊಟಿ ರೂ ಬೆಳೆ, ಚಿನ್ನ, ಠೇವಣೆಗಳ ಮೇಲೆ, ಸಣ್ಣ ವ್ಯಾಪಾರಕ್ಕೆ ಸಾಲ ನೀಡಿದೆ. ಇದರಲ್ಲಿ ಹೈನುಗಾರಿಕೆ, ಎತ್ತು ಬಂಡಿ, ಭೂ ಅಭಿವೃದ್ಧಿ, ಗೃಹ ಸೇರಿದಂತೆ 141 ಜನರಿಗೆ ಮಧ್ಯಮ ಅವಧಿ ಸಾಲ ನೀಡಿದೆ. ಸರ್ಕಾರದಿಂದ ಸಾಲ ಮತ್ತು ಬಡ್ಡಿ ಮನ್ನಾದಲ್ಲಿ ಸೊಸೈಟಿಗೆ 81.42 ಲಕ್ಷ ರೂ ಬರಬೇಕಿದೆ. ಒಟ್ಟಾರೆ ಸೊಸೈಟಿಯು 61.49 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದು. 1.91 ಕೋಟಿ ರೂ ಶಿಲ್ಕು ಹೊಂದಿದೆ. ರಸಾಯನಿಕ ಗೊಬ್ಬರ ಮತ್ತಿತರೇ ವ್ಯಾಪಾರದಿಂದ 12.73 ಲಕ್ಷ ರು ಲಾಭ ಗಳಿಸಿದೆ. ಠೇವಣೆಗಳ ಮೇಲೆ 0.25 ರಿಂದ 0.75 ರಷ್ಟು ಹೆಚ್ಚಿಸಲು ಸಭೆಗೆ ಮಂಡಿಸಲಾಯ್ತು.





















