
ಕಮ್ಮಗೊಂಡನಹಳ್ಳಿ ಸಣ್ಣ ಕೈಗಾರಿಕೆಗಳ ಸಂಘ ಹಮ್ಮಿಕೊಂಡಿದ್ದ ೨ನೇ ವರ್ಷದ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ. ವೆಂಕಟೇಶ್, ಕಾರ್ಯದರ್ಶಿ ಎಚ್. ಎನ್. ಶಿವಕುಮಾರ್, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶೆಟ್ಟಿಹಳ್ಳಿ ವಾರ್ಡ್‌ನ ಮಾಜಿ ಬಿಬಿಎಂಪಿ ಸದಸ್ಯ ನಾಗಭೂಷಣ್, ಕಾಸಿಯಾ ಮಾಜಿ ಅಧ್ಯಕ್ಷ ರಾಜು, ಮಾಜಿ ಅಧ್ಯಕ್ಷ ರಾಜಗೋಪಾಲ್, ಜಿಎಸ್‌ಟಿ ಮಾಜಿ ಛೇರ್‍ಮನ್ ಉಮಾಶಂಕರ್, ಪೀಣ್ಯದ ಮಾಜಿ ಅಧ್ಯಕ್ಷರುಗಳಾದ ಮಂಜುನಾಥ್, ಶಿವಕುಮಾರ್, ಧರ್ಮಪೀಠ ಡೆವಲಪರ್‍ಸ್‌ನ ಛೇರ್‍ಮನ್ ಕೃಷ್ಣಪ್ಪ, ಶ್ರೀ ಚಿದಂಬರಂ ಕೋ- ಆಪರೇಟಿವ್ ಬ್ಯಾಂಕ್ ಛೇರ್‍ಮನ್ ಜಿ.ಕೆ. ಕುಲಕರ್ಣಿ, ನಿಕಟಪೂರ್ವ ಅಧ್ಯಕ್ಷರಾಗಿರುವ ಗಿರೀಶ್ ವಿ. ಗುಮಾಸ್ತೆ ಭಾಗವಹಿಸಿದ್ದರು.































