ತಮಿಳುನಾಡಿನ ಥಳಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಾಮಚಂದ್ರನ್‌ರವರು ನಗರದ ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ ನನ್ನ ಗೆಲುವಿಗೆ ಶ್ರಮಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ. ಬಾಬುರೆಡ್ಡಿ, ಗಟ್ಟಳ್ಳಿ ಸೀನಪ್ಪ, ಗಣೇಶ್ ಗೌಡ, ಅತ್ತಿಬೆಲೆ ರವಿ, ವಕೀಲರಾದ ಹರೀಶ್ ಗೌಡ ಮತ್ತಿತರರು ಇದ್ದಾರೆ.