Home ಸಿನೆಮಾ ಆಕ್ಷನ್ ಥ್ರಿಲ್ಲರ್ ‘ಶೇರ್’

ಆಕ್ಷನ್ ಥ್ರಿಲ್ಲರ್ ‘ಶೇರ್’

ಈ ವಾರ ತೆರೆಗೆ:

ಕಿರಣ್ ರಾಜ್ ಹಾಗೂ ಕ್ರಿಸ್ (ಗಿಲ್ಲಿ) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಶೇರ್ ಚಿತ್ರ ಈ ವಾರ, ಮೇ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೀದರ್ ಮೂಲದ ಸುದರ್ಶನ್ ಸುಂದರರಾಜ್ ನಿರ್ಮಾಣದ ಈ ಚಿತ್ರಕ್ಕೆ “ರತ್ನ ಮಂಜರಿ” ಹಾಗೂ “ಭರ್ಜರಿ ಗಂಡು” ಚಿತ್ರಗಳ ನಿರ್ದೇಶಕರಾದ ಪ್ರಸಿದ್ಧ್ ಆಕ್ಷನ್ ಕಟ್ ಹೇಳಿದ್ದಾರೆ.

ಪಕ್ಕಾ ಆಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಪ್ರೇಕ್ಷಕರನ್ನು ಕುರ್ಚಿಯ ಅಂಚಿನಲ್ಲೇ ಕೂರಿಸುವಂತಹ ಐದು ಭರ್ಜರಿ ಸಾಹಸ ಸನ್ನಿವೇಶಗಳಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಟ್ರೇಲರ್ ಮೂಲಕವೇ ಚಿತ್ರದ ವೇಗದ ಕಥಾಹಂದರ ಹಾಗೂ ಆಕ್ಷನ್ ದೃಶ್ಯಗಳು ಸಿನಿಪ್ರೇಕ್ಷಕರ ಗಮನ ಸೆಳೆದಿವೆ.

ಚಿತ್ರದಲ್ಲಿ ಕಿರಣ್ ರಾಜ್ ಹಾಗೂ ಕ್ರಿಸ್ (ಗಿಲ್ಲಿ) ಜೊತೆಗೆ ಸುರೇಖ, ತನೀಶಾ ಕುಪ್ಪಂಡ, ಯಶ್ ಶೆಟ್ಟಿ, ಶೋಭ್ ರಾಜ್, ಬಲ ರಾಜ್ವಾಡಿ ಹಾಗೂ ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.