
ನವದೆಹಲಿ,ಮೇ.೧೭- ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳುತ್ತಿದ್ದ ತಿರುವನಂತಪುರಂ-ಹಜರತ್ ನಿಝಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಮಧ್ಯಪ್ರದೇಶದ ರತ್ಲಂ ಸಮೀಪ ಬೆಂಕಿ ಅವಘಡ ಸಂಭವಿಸಿದ್ದು ೬೮ ಜನರನ್ನು ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ, ಇದರಿಂದ ರೈಲು ಬೋಗಿಯಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಾಗಿದ್ದಾರೆ.
ಬೆಂಕಿ ಕಾಣಿಸಿಕೊಂಡ ಕೋಚ್ ಅನ್ನು ರೇಕ್‌ನಿಂದ ಬೇರ್ಪಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಓವರ್‍ಹೆಡ್ ವಿದ್ಯುತ್ ಸರಬರಾಜು ಅನ್ನು ತಕ್ಷಣವೇ ಆಫ್ ಮಾಡಲಾಗಿದೆ. ತಕ್ಷಣ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ ೫:೧೫ ಕ್ಕೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಯಾವುದೇ ಸಾವು -ನೋವು ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಂಡ ಬೋಗಿಯನ್ನು ಸ್ಥಳಾಂತರ ಮಾಡಲಾಗಿದ್ದು ಸ್ಥಳದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹವಾನಿಯಂತ್ರಿಯ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಬೋಗಿಯಲ್ಲಿ ಅಳವಡಿಸಲಾಗಿದ್ದು ನಕಲಿ ಮತ್ತು ಗುಣಮಟ್ಟವಲ್ಲದ ಉಪಕರಣಗಳೇ ಕಾರಣ ಎನ್ನುವ ಸಂಗತಿ ಬಯಲಾಗಿದ್ದು ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರತ್ಲಂ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುಖೇಶ್ ಕುಮಾರ್ ಪ್ರತಿಕ್ರಿಯಿಸಿ ಕೋಟಾ ವಿಭಾಗದ ಅಲೋಟ್ ಮತ್ತು ಲುನಿರಿಚಾ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಘಟನೆಗೆ ಪೊಲೀಸರು ಕಾರಣ ಪತ್ತೆ ಮಾಡುತ್ತಿದ್ದಾರೆ ಎಂದು ಹೇಳೀದ್ದಾರೆ.
ಕೋಟಾ ರೈಲ್ವೆ ಪಿಆರೊ ರವೀಂದರ ಲಖರ “ಪ್ರತಿಕ್ರಿಯಿಸಿ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಸಲಾಗಿದೆ, ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಕೋಟಾವರೆಗಿನ ಪ್ರಯಾಣಕ್ಕಾಗಿ ಅವರನ್ನು ಇತರ ಬೋಗಿಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಪೂರ್ಣ ಸಾಮರ್ಥ್ಯ ಪುನಃಸ್ಥಾಪಿಸಲು ಕೋಟಾ ನಿಲ್ದಾಣದಲ್ಲಿ ಹೆಚ್ಚುವರಿ ಬೋಗಿಯನ್ನು ಜೋಡಿಸಲಾಗುವುದು ಎಂದು ತಿಳಿಸಿದ್ದಾರೆ.
ರತ್ಲಂನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸ್ಥಳಕ್ಕೆ ತಲುಪಿದ್ದಾರೆ ಮತ್ತು ಅಪಘಾತ ಪರಿಹಾರ ರೈಲು ಕೂಡ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮಾರ್ಚ್‌ನಲ್ಲಿ ಮುಂಬೈ-ಫಿರೋಜ್‌ಪುರ ಪಂಜಾಬ್ ಮೇಲ್‌ನಲ್ಲಿ ಸಂಭವಿಸಿದ ಬೆಂಕಿಯ ಸಂದರ್ಭದಲ್ಲಿ ವಿಫಲವಾದ ನಕಲಿ ಮತ್ತು ಅವಧಿ ಮೀರಿದ ಸರ್ಕ್ಯೂಟ್ ಬ್ರೇಕರ್ ಪೂರೈಸಿದ ಆರೋಪದ ಮೇಲೆ ಕೋಲ್ಕತ್ತಾ ಮೂಲದ ರೈಲ್ವೆ ಉಪಕರಣಗಳ ಪೂರೈಕೆದಾರರ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ, ಈ ರೀತಿ ಸಾಧನ ಅವಳವಡಿಕೆಯಿಂದ ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡಿದೆ.
೨೦೨೫ ರ ನವೆಂಬರ್‍ನಲ್ಲಿ ಆನ್‌ಲೈನ್ ಟೆಂಡರ್ ಪಡೆದ ನಂತರ ಆರೋಪಿ ಸಂಸ್ಥೆಯಾದ ಆಸ್ಪೀ ಸೇಲ್ಸ್ ಕಾಪೊರೇಷನ್, ರೈಲ್ವೆಗೆ ೪ ಲಕ್ಷಕ್ಕೆ ೩೨೫ ಮೋಟಾರ್ ಪೋರಟೆಕ್ಷನ್ ಸರ್ಕ್ಯೂಟ್ ಬ್ರೇಕರ್‌ಗಳನ್ನು ಪೂರೈಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಕೆಲವು ಸಾಧನಗಳನ್ನು ನಂತರ ಜೋಡಿಸಲಾದ ಬೋಗಿಯಲ್ಲಿ ಸ್ಥಾಪಿಸಲಾಗಿದೆ. ಪಂಜಾಬ್ ಮೇಲ್.
ಮಾರ್ಚ್ ೭ ರಂದು, ರೈಲು ಮುಂಬೈನಿಂದ ಫಿರೋಜ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ, ಫಿರೋಜ್‌ಪುರದ ಬಳಿ ಒಂದು ಬೋಗಿಯಿಂದ ಹೊಗೆ ಹೊರಹೊಮ್ಮಿತು, ಇದು ಬೆಂಕಿಯಂತಹ ಪರಿಸ್ಥಿತಿಯ ಬಗ್ಗೆ ಸುಳಿವು ನೀಡಿದೆ.
“ಅಧಿಕ ವೋಲ್ಟೇಜ್ ಕರೆಂಟ್ ಇದ್ದರೂ ಬೋಗಿಯಲ್ಲಿ ಅಳವಡಿಸಲಾದ ಟ್ರಿಪ್ ಆಗಲಿಲ್ಲ, ಇದರ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ವಿಚಾರಣೆಯ ಸಮಯದಲ್ಲಿ, ಕೆಲವು ಉಪಕರಣಗಳು ನಕಲಿ ಎಂದು ಕಂಡುಬಂದಿದೆ. ಮೂಲ ತಯಾರಕರು ಆಸ್ಪೀ ಸೇಲ್ಸ್ ಕಾಪೆರ್ರೇಷನ್ ತನ್ನ ಅಧಿಕೃತ ಡೀಲರ್ ಅಲ್ಲ ಮತ್ತು ಸರಬರಾಜು ಮಾಡಿದ ಉತ್ಪನ್ನದ ಅವಧಿ ಮುಗಿದಿದೆ ಎಂದು ರೈಲ್ವೆಗೆ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಬರಾಜುದಾರರು ದೋಷಯುಕ್ತ ಮತ್ತು ನಕಲಿ ವಿದ್ಯುತ್ ಉಪಕರಣಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ ೩೧೮(೪) (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಯನ್ನು ಪ್ರೇರೇಪಿಸುವುದು) ಮತ್ತು ೧೨೫ (ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

























