ಪುದುಚೇರಿಯಲ್ಲಿ ನಡೆದ ೧೫ ವರ್ಷದೊಳಗಿನ ದಕ್ಷಿಣ ಭಾರತ ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಫ್ರೀ ಸ್ಟೈಲ್, ಗ್ರೀಕೋ ರೋಮನ್ ಮತ್ತು ಮಹಿಳಾ ವಿಭಾಗದಲ್ಲಿ ಕ್ರಮವಾಗಿ ೨೮ ಚಿನ್ನ ೦೧ ಬೆಳ್ಳಿ ಹಾಗೂ ೦೧ ಕಂಚು ಪದಕಗಳನ್ನ ಸಮಗ್ರ ಪ್ರಶಸ್ತಿಯನ್ನ ಗಳಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದಂತಹ ಬಿ ಗುಣರಂಜನ್ ಶೆಟ್ಟಿ ರವರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದರು.