Home ಮುಖಪುಟ ಸುದ್ದಿ ಚಿನ್ನ ಖರೀದಿ ಇಳಿಕೆ

ಚಿನ್ನ ಖರೀದಿ ಇಳಿಕೆ

ನವದೆಹಲಿ,ಮೇ.೧೭- ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕರು ಒಂದು ವರ್ಷದವರೆಗೆ ಅನಗತ್ಯ ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಒತ್ತಾಯಿಸಿದ ನಂತರ ೧೦ ರಲ್ಲಿ ಆರು ಭಾರತೀಯರು ಚಿನ್ನ ಖರೀದಿಸುವುದನ್ನು ನಿಲ್ಲಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.


ಜೊತೆಗೆ ವಿದೇಶಿ ವಿನಿಮಯವನ್ನು ಉಳಿಸಬೇಕು ಎಂದು ಕರೆಗೆ ದೇಶದ ಜನತೆ ಸ್ಪಂದಿಸಿದ್ದಾರೆ ಎಂದು ತಿಳಿಸಲಾಗಿದೆ


ವಿದೇಶಿ ವಿನಿಮಯ ಸಂಗ್ರಹವನ್ನು ಸಂರಕ್ಷಿಸಲು ಸಹಾಯ ಮಾಡಲು ಅನಗತ್ಯ ಖರೀದಿ ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಮನವಿಯನ್ನು ಅನುಸರಿಸಿ, ಶೇಕಡಾ ೬೧ ರಷ್ಟು ಚಿನ್ನ ಮಾಲೀಕರು ಮತ್ತು ಖರೀದಿದಾರರು ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ತಪ್ಪಿಸುವುದಾಗಿ ಹೇಳಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆ ತಿಳಿಸಿದೆ.


ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು ಅಮೆರಿಕ ಮತ್ತು ಇಸ್ರೇಲ್ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದಾಗಿ ವಿದೇಶಿ ವಿನಿಮಯ ಹೊರಹರಿವಿನ ಮೇಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ೨೦೨೬ರ ಹಣಕಾಸು ವರ್ಷದಲ್ಲಿ ಭಾರತದ ಚಿನ್ನದ ಆಮದು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.


ಲೋಕಲ್‌ಸರ್ಕಲ್ಸ್ ವರದಿಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಶೇ.೬೬ ರಷ್ಟು ಜನರು ಒಂದು ವರ್ಷದವರೆಗೆ ಚಿನ್ನದ ಖರೀದಿ ತಪ್ಪಿಸುವುದರಿಂದ ವಿದೇಶಿ ವಿನಿಮಯ ಸಂಗ್ರಹವನ್ನು ಸಂರಕ್ಷಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.


೨೦೨೬ ರಲ್ಲಿ ೭೧.೯೮ ಶತಕೋಟಿ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದ್ದು, ೨೦೨೫ರಲ್ಲಿ ೫೮ ಶತಕೋಟಿಯಿಂದ ಶೇ.೨೪ ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾದ ವಾಣಿಜ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.


ಚಿನ್ನದ ಆಮದು ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ. ೪.೭೬ ರಷ್ಟು ಕುಸಿದು ೭೫೭.೦೯ ಟನ್‌ಗಳಿಂದ ೭೨೧.೦೩ ಟನ್‌ಗಳಿಗೆ ತಲುಪಿದೆ ಎಂದು ವರದಿ ತಿಳಿಸಿದೆ,


ಇದು ಜಾಗತಿಕ ಬೆಲೆಗಳಲ್ಲಿನ ಏರಿಕೆಯು ಆಮದು ಮೌಲ್ಯದಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಸೂಚಿಸುತ್ತದೆ. “೨೦೨೪-೨೫ನೇ ಹಣಕಾಸು ವರ್ಷದಲ್ಲಿ ಪ್ರತಿ ಕೆಜಿಗೆ ಸರಿಸುಮಾರು ೭೬,೬೧೭ ಡಾಲರ್ ನಿಂದ ೨೦೨೫-೨೬ನೇ ಹಣಕಾಸು ವರ್ಷದಲ್ಲಿ ಪ್ರತಿ ಕೆಜಿಗೆ ಸರಿಸುಮಾರು ೯೯,೮೨೫ ಡಾಲರ್ ಕ್ಕೆ ಏರಿದೆ” ಎಂದು ವರದಿ ತಿಳಿಸಿದೆ.


೨೦೨೬ ರಲ್ಲಿ ಚಿನ್ನ ಮತ್ತು ಬೆಳ್ಳಿ ಆಮದುಗಳು ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಶೇಕಡಾ ೨೬.೭ ರಷ್ಟು ಏರಿಕೆಯಾಗಿ $
೧೦೨.೫ ಡಾಲರ್ ಶತಕೋಟಿಗೆ ತಲುಪಿದೆ, ಭಾರತದ ಒಟ್ಟು ಆಮದುಗಳಲ್ಲಿ ಅವುಗಳ ಪಾಲು ಹಿಂದಿನ ಆರ್ಥಿಕ ವರ್ಷದಲ್ಲಿ ಶೇಕಾ ೧೧.೮ ರಿಂದ ೧೪ ಕ್ಕೆ ಏರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಚೀನಾ ನಂತರ ಭಾರತ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಬಳಕೆದಾರ ರಾಷ್ಟ್ರವಾಗಿದೆ. ಸಮೀಕ್ಷೆಗೆ ಒಳಗಾದ ೮೪,೦೦೦ ಪ್ರತಿಕ್ರಿಯೆಗಳಲ್ಲಿ, ಶೇಕಡಾ ೨೮ ಜನರು ಚಿನ್ನದ ಖರೀದಿಯನ್ನು “ಗಮನಾರ್ಹವಾಗಿ” ಕಡಿಮೆ ಮಾಡುವುದಾಗಿ ಹೇಳಿದ್ದಾರೆ, ಆದರೆ ಶೇಕಡಾ ೩೬ ಜನರು ಮುಂದಿನ ವರ್ಷದಲ್ಲಿ ಚಿನ್ನ ಖರೀದಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿಯವರ ಮನವಿಯ ಹೊರತಾಗಿಯೂ, ಮದುವೆ ಅಥವಾ ಕುಟುಂಬ ಸಂಪ್ರದಾಯಗಳಿಗೆ ಮಾತ್ರ ಚಿನ್ನ ಖರೀದಿಸುವುದನ್ನು ಮುಂದುವರಿಸುವುದಾಗಿ ಇನ್ನೂ ಶೇಕಡಾ ೧೯ ರಷ್ಟು ಮಂದಿ ಚಿನ್ ಖರೀದಿಸುವುದಾಗಿ ತಿಳಿಸಿದ್ದಾರೆ.

ಅನಿಶ್ಚಿತತೆಯ ಅವಧಿಯಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿರುವುದರಿಂದ ಇನ್ನೂ ಶೇಕಡಾ ೧೯ ರಷ್ಡು ಜನರು ಚಿನ್ನ ಖರೀದಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ