
ಕೆಆರ್ ಪುರ, ಮೇ ೧೮- ದೂರವಾಣಿನಗರ, ವಿಜಿನಾಪುರ ವಾರ್ಡನ ಸೇರಿದಂತೆ ವಿವಿಧೆಡೆ ಉತ್ತಮ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ನೆಮ್ಮದಿ ವಾತಾವರಣ ನೀಡಿದ್ದೇನೆ ಎಂದು ಶಾಸಕ ಬೈರತಿ ಬಸವರಾಜ ಅವರು ತಿಳಿಸಿದರು.
ವಿಜಿನಾಪುರ ವಾರ್ಡ್ ನಲ್ಲಿ ವೇದಪ್ರದ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಕನ್ನಡಕಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ೧೩ ವರ್ಷಗಳ ಹಿಂದೆ ವಿಜಿನಾಪುರ ವಾರ್ಡ್ ಚಿತ್ರಣ ಹೇಗಿತ್ತು ಈಗ ಹೇಗಿದೆ , ಸಂಪೂರ್ಣ ಚಿತ್ರಣ ಬದಲಿಸಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು.
ಕಣ್ಣಿನ ಸಮಸ್ಯೆಯಿಂದ ಬದುಕುವುದು ತುಂಬನೇ ಕಷ್ಟ. ಇಂತಹ ಸಂದರ್ಭದಲ್ಲಿ ದೃಷ್ಟಿ ದೋಷ ಇರುವವರನ್ನು ಗುರುತಿಸಿ ಚಿಕಿತ್ಸೆ ಕೊಡಿಸಿ ಕನ್ನಡಕಗಳನ್ನು ಉಚಿತವಾಗಿ ನೀಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
ಈ ವಾರ್ಡ್ ಗೆ ಬೇಕಾಗಿರುವ ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ, ಚರಂಡಿ ಎಲ್ಲವನ್ನೂ ಮಾಡಿದ್ದೇನೆ ಯಾವುದೇ ಸಮಸ್ಯೆ ಇದ್ದರೂ ತಿಳಿಸಿ ಎಂದು ಹೇಳಿದರು.
ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ ಅವರು ಮಾತನಾಡಿ, ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಜೀವನ ಅಭಿವೃದ್ಧಿ ಮಾಡಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಬಡವರಿಗೆ ನೆರವಾಗುವ ಕೆಲಸ ಉಳ್ಳವರು ಮಾಡಬೇಕಿದೆ. ಆಗ ಮಾತ್ರ ಸಮನಾದ ಸಮಾಜ ಸೃಷ್ಟಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್,ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ, ಮುಖಂಡರಾದ ಪಿ.ಡಿ.ಚಂದ್ರು,ಬಾಬು ಸೆಲ್ವಂ, ಗೋಪಾಲಣ್ಣ, ವೇದಪ್ರಧ ಟ್ರಸ್ಟ್ ಅಧ್ಯಕ್ಷೆ ಜಯಮ್ಮ, ಆರ್.ಕೃಷ್ಣಪ್ಪ, ಖಜಾಂಚಿ ಕೆ.ಪ್ರವೀಣ್ ಕುಮಾರ್, ಕೆ.ವರುಣ್ ಮತ್ತಿತರರಿದ್ದರು.





















