
ಕಲಬುರಗಿ, ಮೇ.18- ಮಕ್ಕಳಲ್ಲಿ ಮತ್ತು ಯುವಕರಲ್ಲಿ ತರಬೇತಿಯ ಮೂಲಕ ಸಂಸ್ಕಾರ ನೀಡುವುದೇ ಖುದ್ದಾಮುಲ್ ಅಹ್ಮದಿಯಾ ಸಂಘಟನೆಯ ಉದ್ದೇಶವಾಗಿದೆ ಎಂದು ಅಹ್ಮದಿಯಾ ಮಿಷನರಿ ಮೌಲ್ವಿ ಜುನೈದ್ ಅಹ್ಮದ ಖಾನ್ ಹೇಳಿದರು.
ತಾರಫೈಲ್ ರಹಮತ ನಗರದ ಅಹ್ಮದಿಯಾ ಮಿಷನ್ ಹೌಸ್ ನಲ್ಲಿ ರವಿವಾರ ಮೇ.17ರಂದು ಆಯೋಜಿಸಿದ್ದ ಸ್ಥಳೀಯ (ಖುದ್ದಾಮುಲ್ ಮತ್ತು ಅತ್ಫಾಲುಲ್ ಅಹ್ಮದಿಯ) ಮಕ್ಕಳ ಮತ್ತು ಯುವ ಘಟಕದ ಸಮಾವೇಶಕ್ಕೆ ಚಾಲನೆ ನೀಡಿ ಉದ್ದೇಶಿಸಿ ಮಾತನಾಡಿದ ಅವರು, ಪಾಪಕಾರ್ಯಗಳಿಂದ ಉಳಿಯಲು ಪ್ರಾರ್ಥನೆ ಮತ್ತು ಧ್ಯಾನ ನಮ್ಮ ರಕ್ಷ ಕವಚಗಳಾಗಿವೆ ಎಂದರು.
ಸಮಾಜದ ಖಲಿಫಾರ ಧ್ವನಿಗಳಿಗೆ ಬಾಸುರಿಯಾಗಿ ಅವರ ಆಜ್ಞಾಪಾಲನೆ ಮಾಡುವ ಮೂಲಕ, ಅವರ ಶಾಂತಿಪ್ರೀಯ ನೈಜ ಇಸ್ಲಾಮೀನ ಸಂದೇಶವನ್ನು ಮತ್ತೋಬ್ಬರಿಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಅಹ್ಮದಿಯಾ ಸಮಾಜದ ಅಮೀರ ಜಮಾತ್ ಜಿಲ್ಲಾಧ್ಯಕ್ಷ ಲಿಯಾಖತ್ ಫರೀದ್ ಉಸ್ತಾದ ಅವರು, ಮಾತನಾಡಿ ಸಮಾಜ ಮತ್ತು ಖಿಲಾಫತ್ ಮೇಲೆ ನಿಷ್ಠೆ ಇಲ್ಲದ ಜೀವನ ದಾರಿ ತಪ್ಪಿದ ಕುರಿಗಳಿಗೆ ಸಮವಾಗಿದೆ ಎಂದರು.
ಸ್ಥಳೀಯ ಮಟ್ಟದ ಸಮಾವೇಶದಲ್ಲಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಬಾಲಕರು ಮತ್ತು ಯುವಕರು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಯಶಸ್ವಿಯಾಗಲು ಇಲ್ಲಿನ ಮೌಲ್ವಿಸಾಹೇಬರ ಮೂಲಕ ತರಬೇತಿ ಪಡೆದುಕೊಂಡು ಸಿದ್ದತೆ ನಡೆಸಿದ್ದಲ್ಲಿ ತಮ್ಮ ಗುರಿಯನ್ನು ತಲುಪಲ ಸಾಧ್ಯವಾಗುತ್ತದೆ ಎಂದರು.
ಬೆಳಗಿನ ತಾಜುದ್ ನಮಾಜ್ ದೊಂದಿಗೆ ಹಾಗೂ ಪವಿತ್ರ ಕುರ್ ಆನ್ ಪಠಣದದ ಮೂಲಕ ಪ್ರಾರಂಭವಾದ ಈ ಸಮಾವೇದಲ್ಲಿ ವಿವಿಧ ಸ್ಪರ್ಧೆಗಳು ಜರುಗಿದವು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸಮಾಜದ ಪ್ರಮುಖರಾದ ಮೊಹ್ಮದ ವಸೀಮ ಅಹ್ಮದ ನೂರ, ಹಷ್ಮತುಲ್ಲಾ ಹೌದೋಡಿ, ಜಿಶಾನ್ ಉಸ್ತಾದ, ಲಿಯಾಖತ ಅಹ್ಮದ ಫರಿದ್ ಉಸ್ತಾದ ಸೇರಿದಂತೆ ಹಲವರಿದ್ದರು. ತಾರೀಕ ಅಹ್ಮದ ಮುಸ್ತಾಕೀಮ ಅವರು ಕಾರ್ಯಕ್ರಮ ನಡೆಸಿಕೊಟ್ಟರು, ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.




















