Home ಜಿಲ್ಲೆ ಕಲಬುರಗಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ವಶ, ಇಬ್ಬರ ಬಂಧನ

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ವಶ, ಇಬ್ಬರ ಬಂಧನ

ಕಲಬುರಗಿ,ಮೇ.18-ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳೂರದಿಂದ ಕಲಬುರಗಿಗೆ ಬುಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಜಾನುವಾರುಗಳನ್ನು ವಿಶ್ವವಿದ್ಯಾಲಯ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.
ಕನ್ಯಾಕೊಳ್ಳೂರ ಗ್ರಾಮದ ಅರ್ಜುನ ಚವ್ಹಾಣ್ ಮತ್ತು ಕಲಬುರಗಿಯ ಫಕ್ರೋದ್ದಿನ್ ತಂದೆ ಶೇಖ್ ಅಬ್ದುಲ್ ಎಂಬುವವರನ್ನು ಬಂಧಿಸಿ 25 ಸಾವಿರ ರೂ.ಮೌಲ್ಯದ 2 ಹೋರಿ, 25 ಸಾವಿರ ರೂ.ಮೌಲ್ಯದ 2 ಸಣ್ಣ ಆಕಳು ಮತ್ತು 1 ಲಕ್ಷ ರೂ.ಮೌಲ್ಯದ ಬುಲೆರೋ ಪಿಕಪ್ ವಾಹನ ಸೇರಿ 1.50 ಲಕ್ಷ ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.