
ಕಲಬುರಗಿ,ಮೇ.18-ಸೈಬರ್ ವಂಚಕನೊಬ್ಬ ಮೊಬೈಲ್‍ಗೆ ಎಪಿಕೆ ಲಿಂಕ್ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 5,46,513 ರೂ.ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ರೆಹಮತ್ ನಗರದ ಹಾದಿಯಾ ನಿಕತ್ ಅಲಿಂಖಾನ್ ಎಂಬುವವರು ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಇವರ ಪತಿ ಅಲಿಂಖಾನ್ ಅವರು ಸೌದಿಯ ರಿಯಾದ್‍ಗೆ ಇಂಜಿನಿಯರ್ ಹುದ್ದೆಯಲ್ಲಿ ಕೆಲಸ ಮಾಡಲು ಹೋಗಿದ್ದು, ಹಾದಿಯಾ ನಿಕತ್ ಅವರ ಮೊಬೈಲ್‍ಗೆ ಸೈಬರ್ ವಂಚಕನೊಬ್ಬ ಎಪಿಕೆ ಲಿಂಕ್ ಕಳುಹಿಸಿ ಅವರ ಪತಿಯ ಬ್ಯಾಂಕ್ ಖಾತೆಯಿಂದ 5.46 ಲಕ್ಷ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.




















