Home ಜಿಲ್ಲೆ ಬೆಂಗಳೂರು ಬೆಂಗಳೂರು- ಮುಂಬೈಗೆ ನೂತನ ರೈಲು

ಬೆಂಗಳೂರು- ಮುಂಬೈಗೆ ನೂತನ ರೈಲು

ಬೆಂಗಳೂರು, ಮೇ. ೧೭- ಬೆಂಗಳೂರು ಮುಂಬೈ ನಡುವೆ ನೂತನ ರೈಲು ಓಡಾಟ ನಡೆಸಲಿದ್ದು, ಹೊಸ ಎಕ್ಸ್‌ಪ್ರೆಸ್ ರೈಲಿಗೆ ಬೆಂಗಳೂರಿನ ಬೈಯಪ್ಪನ ಹಳ್ಳಿಯ ಸರ್ ಎಂ. ವಿಶ್ವೇಶ್ವರಯ ರೈಲು ನಿಲ್ದಾಣದಲ್ಲಿ ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಸಂಸದರಾದ ಪಿ.ಸಿ. ಮೋಹನ್, ಹಸಿರು ನಿಶಾನೆ ತೋರಿದರು.


ಹೊಸ ರೈಲಿನ ಓಡಾಟದ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್. ಸಂಸದರಾದ ತೇಜಸ್ವಿಸೂರ್ಯ, ವರ್ಚುಯಲ್ ಮೂಲಕ ಭಾಗಿಯಾದರು.


ಬೆಂಗಳೂರು, ಮುಂಬೈ ನಡುವೆ ಸರ್. ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಈ ಹೊಸ ರೈಲು ವಾರಕ್ಕೆ ಎರಡು ದಿನ ಸಂಚರಿಸಲಿದೆ. ಶನಿವಾರ ಮತ್ತು ಮಂಗಳವಾರದಂದು ಬೆಂಗಳೂರಿನಿಂದ ಮುಂಬೈಗೆ, ಭಾನುವಾರ ಮತ್ತು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಸಂಚರಿಸಲಿದೆ.


ಹುಬ್ಬಳ್ಳಿ, ಧಾರವಾಡ,ಬೆಳಗಾವಿ, ಮಹಾರಾಷ್ಟ್ರದ ಪುಣೆ ಮುಂಬೈ ನಗರಗಳಿಗೆ ಈ ರೈಲು ಸಂರ್ಪಕ ಕಲ್ಪಿಸಲಿದೆ. ಈ ಹೊಸ ರೈಲು ೧೭ ಕೋಚ್ ಗಳನ್ನು ಹೊಂದಿದ್ದು, ಒಂದು ಎಸಿ, ೨ ಟೈರ್, ೪ ಎಸಿ-ಟೈರ್ , ೬ ಸ್ಲೀಪರ್, ೪ ಸಾಮಾನ್ಯ ದರ್ಜೆ ಬೋಗಿಗಳನ್ನು ಒಳಗೊಂಡಿದೆ.


ಈ ನೂತನ ರೈಲು ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ನೆಹರ್ ಸಿಂಗ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆಶುತೋಸ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.


ಮೆಟ್ರೋದಲ್ಲಿ ಸಂಚಾರ
ನೂತನ ರೈಲು ಓಡಾಟದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದ ಪಿ.ಸಿ. ಮೋಹನ್ ಬೈಯಪ್ಪನ ಹಳ್ಳಿ ರೈಲು ನಿಲ್ದಾಣದಕ್ಕೆ ಮೆಟ್ರೋದಲ್ಲಿ ಸಂಚರಿಸಿದ್ದು, ವಿಶೇಷವಾಗಿತ್ತು.