Home ಜಿಲ್ಲೆ ಹೊರನಾಡು, ಗಡಿನಾಡು ಶಬ್ಧಗಳ ವ್ಯಾಖ್ಯಾನ

ಹೊರನಾಡು, ಗಡಿನಾಡು ಶಬ್ಧಗಳ ವ್ಯಾಖ್ಯಾನ

ಸಂಜೆವಾಣಿ ವಾರ್ತೆ

ಬಳ್ಳಾರಿ, ಸೆ.05: ಬೆಂಗಳೂರಿನ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಹೊರನಾಡು ಮತ್ತು ಗಡಿನಾಡು ಎಂಬ ಶಬ್ದಗಳ ವ್ಯಾಖ್ಯಾನದ ಬಗ್ಗೆ ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿದ್ದರು. ಬಹಳಷ್ಟು ಅತಿಥಿಗಳು ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಕರ್ನಾಟಕ ಗಡಿ ಅಭಿರುದ್ದಿ ಪ್ರಾಧಿಕಾರದ ಅಧ್ಯಕ್ಷರಾದಂತಹ ಸೋಮಣ್ಣ ಬೇವಿನ ಮರದ ಮತ್ತು ಕಾರ್ಯದರ್ಶಿಗಳದಂತ ಪ್ರಕಾಶ್ ಮತ್ತಿಹಳ್ಳಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತಹ ಪ್ರೊಫೆಸರ್ ಪುರುಷೋತ್ತಮ್ ಬಿಳಿ ಮಲೆ ಮತ್ತು ಡಾಕ್ಟರ್ ರಾಜಕುಮಾರ್ ಸಂಘಟನೆಯ ಅಧ್ಯಕ್ಷರಾದಂತಹ ಸಾರಾ ಗೋವಿಂದು ಅವರು ಮತ್ತು ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೊರನಾಡು ಮತ್ತು ಗಡಿನಾಡುಗಳ ವ್ಯಾಖ್ಯಾನವನ್ನು ವ್ಯಕ್ತಪಡಿಸಿದರು ಆರು ರಾಜ್ಯಗಳ ಆಂಧ್ರ ಪ್ರದೇಶ್, ತೆಲಂಗಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಮಹಾರಾಷ್ಟ್ರ,ಗೋವಾ, ಕೇರಳದ ಪ್ರತಿನಿಧಿಗಳು ಭಾಗವಹಿಸಿದ್ದರು. ಸೋಮವಾರದಂದು ಕೇಂದ್ರ ಶಿಕ್ಷಣ ಸಚಿವರನ್ನು ಭೇಟಿಯಾಗಿ ಈ ವ್ಯಾಖ್ಯಾನದ ಬಗ್ಗೆ ವಿವರಿಸಿ ನಿರ್ಣಯಿಸುವುದಾಗಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಕನ್ನಡ ಶಿಕ್ಷಕರ ಅಧ್ಯಕ್ಷರಾದ

ಎಂ.ಗಿರಿಜಾಪತಿ ತೆಲಂಗಾಣದ ಎಸ್.ರಾಮಲಿಂಗಪ್ಪ ಸರ್ ಮತ್ತು ಕನ್ನಡ ಕಲ್ಯಾಣ ಅಭಿವೃದ್ಧಿ ಸಂಘದ ಅಧ್ಯಕ್ಷರಾದ  ಧರ್ಮೇಂದ್ರ ಪೂಜಾರಿ ಸರ್ ಅವರು ಇದ್ದರು.

g4