
ಸಂಜೆವಾಣಿ ವಾರ್ತೆ
ಹುಣಸೂರು,ಅ.05 – ಪಿರಿಯಾಪಟ್ಟಣದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಸೇವಾ ಅಹವಾಲು ಸಭೆಯಲ್ಲಿ ಸತ್ಯ ಎಂ.ಎ.ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ತಾಲೂಕಿನ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಹಾಗೂ ಅವಶ್ಯಕ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕಲುಷಿತಗೊಂಡಿರುವ ಲಕ್ಷ್ಮಣ ತೀರ್ಥ ನದಿ ಶುದ್ಧೀಕರಣಕ್ಕಾಗಿ ಅನುದಾನ ಮೀಸಲಿರುವಂತೆ ಮನವಿ.
37 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಆಸ್ಪತ್ರೆಯ ಉಳಿದ ಕಾಮಗಾರಿಯನ್ನು ಅನುದಾನ ಬಿಡುಗಡೆ ಮಾಡಿ ಪೂರೈಸಿ ಶೀಘ್ರವಾಗಿ ಉದ್ಘಾಟಿಸಬೇಕಾಗಿ ಕೋರಿ.
ಶ್ರೀ ಕ್ಷೇತ್ರ ಕಪ್ಪಡಿ ರಾಚಪ್ಪಾಜಿ ಸನ್ನಿಧಿ ಬಳಿಯಿಂದ ಕಾವೇರಿ ನದಿಗೆ ಅಡ್ಡಲಾಗಿ ಹಾರಂಗಿ ಇಲಾಖೆ ವತಿಯಿಂದ ಹುಣಸೂರು ತಾಲೂಕು ಗಾವಡಗೆರೆ ಏತ ನೀರಾವರಿ ಯೋಜನೆ ಮಂಜೂರಾತಿ ಕೋರಿ.
ಕಳೆದ 12 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಅರಸು ಕಲಾಭವನ ಕಾಮಗಾರಿ ಸಂಪೂರ್ಣಗೊಳ್ಳದೆ ಈಗ ಪಾಳು ಬಿದ್ದಿದ್ದು ಶೀಘ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಣೆಗೊಳಿಸಬೇಕಾಗಿ ಹಾಗೂ ಅರಸು ಕಲಾಭವನ ಮತ್ತು ಅರಸು ಹೈಟಿಕ್ ಆಸ್ಪತ್ರೆ ಮಧ್ಯಭಾಗದಲ್ಲಿ ಅರಸುರವರು ನಿಂತಿರುವ ಪುತ್ತಳಿಯನ್ನು ಸ್ಥಾಪಿಸಬೇಕೆಂದು ಕೋರಿ.
ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಹಾಗೂ ಪಿರಿಯಾಪಟ್ಟಣದಿಂದ ಮೈಸೂರಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ.
ಪಿರಿಯಾಪಟ್ಟಣ ಹುಣಸೂರು ಬಿಳಿಕೆರೆ ಇಲವಾಲ ಮಾರ್ಗವಾಗಿ ಮಡಿಕೇರಿ ಡಿಪೆÇೀ ಕೆಎಸ್ಆರ್ಟಿಸಿ ಬಸ್ಸು ಸಂಚರಿಸುತ್ತಿದ್ದು ಈ ಮಾರ್ಗವಾಗಿ ಬೆಳಗೋಳ ಶ್ರೀರಂಗಪಟ್ಟಣ ಮಧ್ಯದಲ್ಲಿ ಡಿ ಪೌಲ್ ಕಾಲೇಜಿಗೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಸ್ಟಾಪ್ ಕೊಡುತ್ತಿಲ್ಲವೆಂದು ಸಂಸ್ಥೆಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆಯೂ ಮಾನ್ಯ ಮುಖ್ಯಮಂತ್ರಿಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ರವರಿಗೆ ನಿರ್ದೇಶನ ನೀಡುವಂತೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ 150ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ಸಹಕಾರಿಯಾಗುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 5 ಲಕ್ಷದವರೆಗಿನ ಸಾಲ ಮನ್ನಾ ಮಾಡಬೇಕೆಂದು ಕೋರಿ.
ಹುಣಸೂರು ತಾಲೂಕು ಉಪ ವಿಭಾಗ ಕೇಂದ್ರವನ್ನು ಮೈಸೂರು ಗ್ರಾಮಾಂತರ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಮನವಿ.
ಕುಶಾಲನಗರ ಶ್ರೀರಂಗಪಟ್ಟಣ ಹೈವೇ ರಸ್ತೆ ನಿರ್ಮಾಣವಾಗುತ್ತಿದ್ದು ಈ ರಸ್ತೆಯ ಎರಡು ಕಡೆಗಳಲ್ಲಿ ಸರ್ವಿಸ್ ರಸ್ತೆ ಇಲ್ಲದೆ ರೈತರು ತಮ್ಮ ಜಮೀನುಗಳಿಗೆ ತಿರುಗಾಡಲು ತೊಂದರೆ ಅನುಭವಿಸುತ್ತಿದ್ದು ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸಿ ಕೊಡಬೇಕಾಗಿ ಕೋರಿ ಮನವಿ.
ಹುಣಸೂರು ಉಪವಿಭಾಗ ಕೇಂದ್ರವಾಗಿರುವುದರಿಂದ ನಿರೋದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹುಣಸೂರಿನಲ್ಲಿ ಕೈಗಾರಿಕೆ ಸ್ಥಾಪಿಸಬೇಕಾಗಿ ಕೋರಿ ಮನವಿ.
ಹುಣಸೂರು ತಾಲೂಕಿನಲ್ಲಿ ಅತಿ ಹೆಚ್ಚು ನಿವೃತ್ತಿ ಹೊಂದಿದ 300ಕ್ಕೂ ಹೆಚ್ಚು ಮಾಜಿ ಸೈನಿಕರಿಗೆ ತಲಾ ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ಕೋರಿ ಮನವಿ.
ಹುಣಸೂರು ತಾಲೂಕಿನಲ್ಲಿ ಭೀಕರ ಬರಗಾಲವಿದ್ದು ಜಾನುವಾರುಗಳಿಗೆ ನೀರಿನ ಅಭಾವ ತಲೆದೋರಿರುವುದರಿಂದ 42 ಗ್ರಾಮ ಪಂಚಾಯತಿಗಳ ಗ್ರಾಮಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಲು ಮನವಿ.
ಹುಣಸೂರು ನಗರದಲ್ಲಿ ಸುಮಾರು 70,000 ಜನಸಂಖ್ಯೆ ಇದು ಹೈಟೆಕ್ ಶೌಚಾಲಯ ನಿರ್ಮಾಣ ಕೋರಿ ಮನವಿ.
ಕಂದಾಯ ಇಲಾಖೆಗೆ ಸೇರಿದ ಹನಗೋಡು ಹೋಬಳಿ ಹಳೆ ವಾರಂಚಿ ಹೊಸಾವರಂಚಿ ಗ್ರಾಮದಲ್ಲಿ 2,000 ಎಕರೆ ಜಮೀನು ಅರಣ್ಯ ಇಲಾಖೆಯವರು ಸರ್ವೆ ಕಾರ್ಯ ಮಾಡಲು ಅಡ್ಡಿ ಮಾಡುತ್ತಿರುವ ಬಗ್ಗೆ.
ಹುಣಸೂರು ತಾಲೂಕು ಶಿರಿಯೂರು ಅಣೆಕಟ್ಟೆಯಿಂದ ಶಿರಿಯೂರು ನಾಲೆ ಮತ್ತು ಹುಸೇನ್ಪುರ ನಾಲೆ ಕಾಂಕ್ರೀಟ್ ಲೈನ್ ಮಾಡಲು ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ ನೀಡಲು ಮನವಿ.
ಬಿಳಿಕೆರೆ ಹೋಬಳಿ ಕೇಂದ್ರದಲ್ಲಿ ನಾಡಕಚೇರಿಗೆ ಕಟ್ಟಡಕ್ಕೆ ಜಾಗ ಮಂಜೂರಾತಿ ಮಾಡಿ ಅನುದಾನ ಬಿಡುಗಡೆ ಮಾಡಿಕೊಡುವಂತೆ ಕೋರಿ ಮನವಿ
ಬಿಳಿಕೆರೆ ಹೋಬಳಿ ಕೇಂದ್ರದಲ್ಲಿ ಸಬ್ ರಿಜಿಸ್ಟರ್ ಕಚೇರಿ ತೆರೆಯಲು ಕೋರಿ ಮನವಿ.
ಹುಣಸೂರು ಪಿರಿಯಾಪಟ್ಟಣ ಎಚ್ .ಡಿ.ಕೋಟೆ ತಾಲೂಕುಗಳಲ್ಲಿ ಅತಿ ಹೆಚ್ಚು ಗಿರಿಜನರು ವಾಸ ಮಾಡುತ್ತಿರುವುದರಿಂದ. ಹುಣಸೂರು ಉಪವಿಭಾಗ ಕೇಂದ್ರವಾಗಿರುವುದರಿಂದ ಆದಿವಾಸಿ ವಿದ್ಯಾರ್ಥಿಗಳಿಗಾಗಿಯೇ ಸರ್ಕಾರಿ ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜು ಸ್ಥಾಪಿಸಲು ಮನವಿ.
ಹುಣಸೂರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಆಂಬುಲೆನ್ಸ್ ಬ್ಯಾಟರಿ ಕೆಟ್ಟು ನಿಂತಿದ್ದು ಬಡ ರೋಗಿಗಳಿಗೆ ತೀವ್ರ ತೊಂದರೆಯಾಗಿರುತ್ತದೆ. ಇದೇ ರೀತಿಯಲ್ಲಿ ರತ್ನಪುರಿ ಹಾಗೂ ಬಿಳಿಕೆರೆ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಆಂಬುಲೆನ್ಸ್ ಇಲ್ಲದೆ ಬಡ ರೋಗಿಗಳು ಪರದಾಡುತ್ತಿದ್ದು ಕೂಡಲೇ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಮನವಿ.
ಹುಣಸೂರು ತಾಲೂಕಿನಲ್ಲಿ 42 ಗ್ರಾಮ ಪಂಚಾಯಿತಿಗಳ ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿದ್ದು, 2, 3, 4 ನೇ ಕಂತುಗಳು ಬಿಡುಗಡೆಯಾಗದೆ ಫಲಾನುಭವಿಗಳ ಸ್ಥಿತಿ ಅತಂತ್ರವಾಗಿದೆ.
ಕೂಡಲೇ ಬಾಕಿ ಇರುವ ಬಿಲ್ಲುಗಳನ್ನು ಬಿಡುಗಡೆಗೊಳಿಸುವಂತೆ ಮನವಿ.
ಹುಣಸೂರು ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರವು ಸರಿಯಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ತಾತ್ಸಾರವಹಿಸಿದೆ, ಕೂಡಲೇ ಸರ್ಕಾರಿ ಜಾಗ ಗುರುತಿಸಿ 42 ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಸುಸಜ್ಜಿದ ನಿವೇಶನಗಳನ್ನು ಕಲ್ಪಿಸಿ ಕೊಡಬೇಕಾಗಿ ಈ ಮೂಲಕ ಸರ್ಕಾರಕ್ಕೆ ಮನವಿ.
ಸುಮಾರು 6,000ಕ್ಕೂ ಹೆಚ್ಚು ಸೈನಿಕರು ಇರುವ ಮೈಸೂರು ಜಿಲ್ಲೆಯಲ್ಲಿ ಸೈನಿಕರಿಗೆ ತಮ್ಮ ಕಾರ್ಯ ಚಟುವಟಿಕೆಗಳಿಗೆ ಸರಿಯಾದ ಸಮಾರಂಭಗಳು ನಡೆಸಲು ಭವನದ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಸೈನಿಕರ ಕಲ್ಯಾಣಕ್ಕಾಗಿ ಸರ್ಕಾರವು ವಿಶೇಷ ಮುತುವರ್ಜಿ ವಹಿಸಿ ಸೈನಿಕರಿಗಾಗಿ ಮೈಸೂರು ಜಿಲ್ಲೆಯ ಸುತ್ತಮುತ್ತ ಐದು ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಮಂಜೂರು ಮಾಡಿ ಕೊಡಬೇಕೆಂದು ಮನವಿ.
ಹುಣಸೂರು ನಗರದಲ್ಲಿ ಪೌರಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಲು ಜಾಗ ಮಂಜೂರು ಮಾಡಿಕೊಡುವಂತೆ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಗಳಿಂದ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲೆಯವರಿಗೆ ನಿರ್ದೇಶನವಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಜಾಗ ಗುರುತಿಸಿಕೊಡದೆ ನಿರ್ಲಕ್ಷತೆ ವಹಿಸಿರುತ್ತಾರೆ. ಆದ್ದರಿಂದ ಈ ಕೂಡಲೇ ಪೌರಕಾರ್ಮಿಕರಿಗಾಗಿ ಸಮುದಾಯ ಭವನ ನಿರ್ಮಿಸಲು ಜಾಗ ಮಂಜೂರು ಮಾಡಿಕೊಡಬೇಕಾಗಿ ಮನವಿ.
ಹುಣಸೂರು ನಗರಸಭಾ ಕಾರ್ಯಾಲಯದ ಪೌರಕಾರ್ಮಿಕ ಹುದ್ದೆಯನ್ನು ನಿಜವಾದ ಅರ್ಹತೆಯುಳ್ಳ ಪೌರಕಾರ್ಮಿಕರಿಗೆ ನೀಡದೆ ಪೌರಾಯುಕ್ತರು ತಮ್ಮ ಇಚ್ಛಾನುಸಾರ ಪೌರಕಾರ್ಮಿಕರಲ್ಲದವರನ್ನು ಸಹ ಪೌರಕಾರ್ಮಿಕ ಹುದ್ದೆಗೆ ನೇಮಕ ಮಾಡಿ ಅರ್ಹತೆಯುಳ್ಳ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಿರುತ್ತಾರೆ. ಈಗಾಗಲೇ ಆಯ್ಕೆ ಮಾಡಲಾಗಿರುವ ಪಟ್ಟಿಯನ್ನು ಪರಿಶೀಲಿಸಿ, ನಿಜವಾದ ಪೌರಕಾರ್ಮಿಕ ಯುವಕರಿಗೆ ಪೌರಕಾರ್ಮಿಕ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಹುಣಸೂರು ನಗರಸಭಾ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ಮನವಿ.
ಹುಣಸೂರು ನಗರದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಹೊಸ ಬಡಾವಣೆಗಳ ನಿರ್ಮಾಣವಾಗಿದ್ದು ತಾಲೂಕಿನಲ್ಲಿ ನಲವತ್ತಕ್ಕೂ ಹೆಚ್ಚು ಜಾತಿ ಜನಾಂಗಗಳಿಗೆ ಅಂದರೆ ಬ್ರಾಹ್ಮಣ, ಲಿಂಗಾಯಿತ, ವೈಷ್ಣವ, ಒಕ್ಕಲಿಗ, ಕುರುಬ, ವಿಶ್ವಕರ್ಮ, ಆರ್ಯ ವೈಶ್ಯ, ಮಡಿವಾಳ, ಗಾಣಿಗ, ನಯನ ಕ್ಷತ್ರಿಯ, ಕುಂಬಾರ, ನಾಮಧಾರಿ, ಮರಾಠ, ಬಾಹುಸಾರ್, ಗೊಂದಳಿ, ಬಣಜಿಗ, ಬಿಲ್ಲವಾ, ಗೊಲ್ಲ, ಆದಿ ಕರ್ನಾಟಕ, ಆದಿ ಜಾಂಬವ, ಭೋವಿ, ರೆಡ್ಡಿ, ಹಕ್ಕಿಪಿಕ್ಕಿ, ಬುಂಡೆ ಬೆಸ್ತ, ಆದಿವಾಸಿಗಳು, ನಾಯಕ, ಬಳೆಗಾರ, ಉಪ್ಪಾರ, ಡೋಂಗ್ರಿ ಗೆರಾಸಿಯ, ದೇವಾಂಗ, ಬಲಿಜ, ಕ್ರೈಸ್ತರು, ಮುಸ್ಲಿಮರು, ಕೊಡವ, ಜೈನರು, ಬೌದ್ಧರು, ಈಡಿಗ, ನಾಯ್ಡು, ಮೇಧರು, ಸೋಲಿಗರು, ಆದಿ ದ್ರಾವಿಡ ಮಾದಿಗರು, ಮೊದಲಿಯಾರ್, ಕೊಡವ ಗೌಡ, 22 ಮನೆ ತೆಲುಗು ಶೆಟ್ಟಿ ಮುಂತಾದ ಹಲವು ಜನಾಂಗಗಳಿಗೆ ಸಿಎ ಸೈಟುಗಳನ್ನು ಕಲ್ಪಿಸಿ ಕೊಡಬೇಕೆಂದು ಮನವಿ.
ಎರಡನೇ ಮಹಾಯುದ್ಧದಲ್ಲಿ ಹೋರಾಡಿದ ಸೈನಿಕರಿಗಾಗಿ ಚೌಡಿಕಟ್ಟೆ ಗ್ರಾಮವನ್ನು ನಿರ್ಮಿಸಲಾಗಿದ್ದು ಈ ಗ್ರಾಮದಲ್ಲಿ ಆಹಾರ ಪಡಿತರ ಕೇಂದ್ರವಿಲ್ಲದೆ ಇಲ್ಲಿನ ಗ್ರಾಮಸ್ಥರು ಬಹಳ ಕಷ್ಟ ಪಡುತ್ತಿದ್ದು ನಮ್ಮ ಸಂಸ್ಥೆಯಲ್ಲಿ ಮನವಿ ಮಾಡಿಕೊಂಡಿದ್ದು ಕೂಡಲೆ ಸೈನಿಕರ ಕಾಲೋನಿಗೆ ಆಹಾರ ಪಡಿತರ ಸಬ್ ಸೆಂಟರ್ ಸ್ಥಾಪಿಸಬೇಕೆಂದು ಮನವಿ.
ಇನ್ನು ತಾಲೂಕಿನ ಅನೇಕ ಸಮಸ್ಯೆಗಳ ಬಗ್ಗೆಯೂ ಸಹ ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಬಳಿ ಮನವಿ ಪತ್ರಗಳನ್ನು ಸಲ್ಲಿಸಿದರು.
ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಸತ್ಯಪ್ಪರವರಿಗೆ ಇರುವ ಕಾಳಜಿಯನ್ನು ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಂಸಿಸಿದರು.

























