Home ಜಿಲ್ಲೆ  ಹಬೊಹಳ್ಳಿ :ಅಕ್ಸೆಲ್ ಬ್ಲೇಡ್ ಕಟ್ಟಾಗಿ ಕೆಕೆಆರ್ಟಿಸಿ  ಬಸ್ ಪಲ್ಟಿ,

 ಹಬೊಹಳ್ಳಿ :ಅಕ್ಸೆಲ್ ಬ್ಲೇಡ್ ಕಟ್ಟಾಗಿ ಕೆಕೆಆರ್ಟಿಸಿ  ಬಸ್ ಪಲ್ಟಿ,

Oplus_131072

ಸಂಜೆವಾಣಿ ವಾರ್ತೆ

 ಹಗರಿಬೊಮ್ಮನಹಳ್ಳಿ. ಸೆ.18 ತಾಲೂಕಿನ ತಂಬ್ರಹಳ್ಳಿ ಬಳಿ ಕೆಕೆಆರ್ಟಿಸಿ ಬಸ್ಸಿನ ಅಕ್ಸೆಲ್ ಬ್ಲೇಡ್ ಕಟ್ಟಾಗಿ  ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಹಗರಿಬೊಮ್ಮನಹಳ್ಳಿಯಿಂದ ತಂಬ್ರಹಳ್ಳಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ಎಲ್ಲರೂ

ಪ್ರಾಣಾಪಾಯದಿಂದ ಪಾರಾಗಿದ್ದಾರೆ  ,ಡ್ರೈವರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.

 ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಬಸ್ ಚಲಿಸುವ ಸಂದರ್ಭದಲ್ಲಿ  ಆಕ್ಸಲ್ ಕಟ್ ಆಗಿ ಬಸ್ ಉರುಳಿದೆ  ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಿಲ್ಲ. ಸಣ್ಣಪುಟ್ಟ  ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ

ಸ್ಥಳಕ್ಕೆ ವಿಜಯನಗರ ಕೆಎಸ್ಆರ್ಟಿಸಿ ಡಿಸಿ ರಾಜೇಶ್ ಹುದ್ಧಾರ್, ಸಿಪಿಐ ವಿಕಾಸ್ ಲಮಾಣಿ, ತಂಬ್ರಳ್ಳಿ ಪಿಎಸ್ ಐ ನಾಗರಾಜ್  ಭೇಟಿ ನೀಡಿ ಪರಿಶೀಲನೆ ನಡೆಸಿದರು