
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಸೆ.22 ತಾಲೂಕಿನ ರೈತರಿಗೆ ಹಗಲು ಹೊತ್ತಿನಲ್ಲಿ 7 ತಾಸು ನಿರಂತರ ವಿದ್ಯುತ್ ಪೂರೈಸಬೇಕು ಎಂದು ರೈತರ ನಿಯೋಗ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹೇಮರೆಡ್ಡಿಯವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಮುಟಗನಹಳ್ಳಿ ಕೊಟ್ರೇಶ್ ಮಾತನಾಡಿ
ಭೀಕರ ಬರಗಾಲ ಆವರಿಸಿದೆ, ಇಂಥ ಸಂದರ್ಭದಲ್ಲಿ ರೈತರ ಪಂಪ್ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡಿದರೆ ರೈತರಿಗೆ ಅನುಕೂಲ ಆಗಲಿದೆ ಎಂದು ಆಗ್ರಹಿಸಿದರು,
ತಾಲೂಕಿನ ಹಳೆ ಮುಟುಗನಹಳ್ಳಿ, ಸೊನ್ನ, ಬ್ಯಾಸಗಿದೇರಿ, ಹೊಸಮುಟುಗನಹಳ್ಳಿ ಯಡ್ರಾಮನಹಳ್ಳಿ, ಶಿವಾನಂದನಗರ,ಸೊಬಟಿ, ನಂದಿಪುರ ಇನ್ನಿತರ ಮಾತನಾಡಿ ಈ ಬಾರಿ ರೈತರಿಗೆ ಮುಂಗಾರು ಮತ್ತು ಹಿಂಗಾರಿ ಮಳೆ ಕೈ ಕೊಟ್ಟಿದೆ, ಇದರಿಂದ ರೈತರು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ, ಇಂಥ ಪರಿಸ್ಥಿತಿಯಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರಿಗೆ ಅನಾನುಕೂಲ ಹೆಚ್ಚಾಗುತ್ತಿದೆ, ರೈತರ ಕಷ್ಟವನ್ನು ಅರ್ಥ ಮಾಡಿಕೊಂಡು ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಹಗಲು ಹೊತ್ತಿನಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಭೋವಿ ಉಮೇಶ್, ನೇತ್ರಾನಂದಪ್ಪ,ಟಿ ಸಿ ದೊಡ್ಡಬಸಪ್ಪ,, ಮುದೇ ಗೌಡ್ರು ಉಮೇಶ್, ದಿಡಗಪ್ಪ, ಹೆಚ್ ಮರಿಯಪ್ಪ, ಪಿ ರಾಮಣ್ಣ, ಕನಕೇರಿ ದೊಡ್ಡಬಸಪ್ಪ,ಹೊಸಮನಿ ನೀಲಪ್ಪ, ಕಡ್ಲಿ ದೇವರಾಜ್, ವೀರಯ್ಯಸ್ವಾಮಿ, ಕನಕಪ್ಪ ಇದ್ದರು.





















