Home ಜಿಲ್ಲೆ ಮೈಸೂರು ಸ್ತುತಿ ಕ್ಲಿನಿಕ್‍ನಲ್ಲಿ ಉಚಿತ ಆರೋಗ್ಯ ಶಿಬಿರ

ಸ್ತುತಿ ಕ್ಲಿನಿಕ್‍ನಲ್ಲಿ ಉಚಿತ ಆರೋಗ್ಯ ಶಿಬಿರ

ಕೆಆರ್ ಪುರ, ಅ.10-ಸಾರ್ವಜನಿಕರಿಗಾಗಿ ಆಯೋಜಿಸುವ ಉಚಿತ ಆರೋಗ್ಯ ಶಿಬಿರಗಳನ್ನು ಸದುಪಯೋಗ ಪಡಿಕೊಳ್ಳುವಂತೆ ಶಾಸಕ ಬೈರತಿ ಬಸವರಾಜ ಅವರು ಕರೆ ನೀಡಿದರು.


ಕ್ಷೇತ್ರದ ಬಸವನಪುರ ಮುಖ್ಯರಸ್ತೆಯ ಸ್ತುತಿ ಕ್ಲಿನಿಕರ ಮತ್ತು ಫಿಸಿಯೋ ಕೇರ್ ನಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ನಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಉತ್ತಮ ಆರೋಗ್ಯ, ಈ ಉಚಿತ ಆರೋಗ್ಯ ಶಿಬಿರಗಳನ್ನು ಸದುಪಯೋಗಪಡೆಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.


ಸ್ತುತಿ ಕ್ಲಿನಿಕ್ ನ ವೈದ್ಯರಾದ ಡಾ.ಅಕ್ಷಿತಾ ಮಾತನಾಡಿ, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಈ ಶಿಬಿರ ನಡೆಯಲಿದ್ದು ಸುತ್ತಮುತ್ತಲಿನ ಬಡಾವಣೆಗಳ ಜನರು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.
ಸಾಮಾನ್ಯ ರೋಗಗಳು, ಮಧುಮೇಹ, ಮೂಳೆ ಸಂಬಂಧಿತ, ಫಿಸಿಯೋ ತಪಾಸಣೆ, ಉಚಿತ ಸಮಗ್ರ ಆರೋಗ್ಯ ಸಲಹೆ, ಒಂದು ಉಚಿತ ಫಿಸಿಯೋಥೆರಪಿ ಚಿಕಿತ್ಸೆ ಒಳಗೊಂಡಿದೆ ಎಂದು ಹೇಳಿದರು.


ಲಯನ್ಸ್ ಕ್ಲಬ್ ಅನುಗ್ರಹ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಲಿನಿಕ್ ನ ವೈದ್ಯರಾದ ಡಾ.ಅಕ್ಷಿತಾ, ಡಾ.ನಾಗೇಶ್, ಡಾ.ರಾಜೇಂದ್ರಕುಮಾರ್ , ಮಾರ್ಟಿನ್ ಬಾಬು, ಕ್ಷೇತ್ರ ಪ್ರ.ಕಾರ್ಯದರ್ಶಿ ಶ್ರೀರಾಮುಲು, ವಾರ್ಡ್ ಅಧ್ಯಕ್ಷರಾದ ಉದಯ್ ಕುಮಾರ್, ಡಿ.ಹೆಚ್.ರಮೇಶ್ , ಮುಖಂಡರಾದ ಖರೀಂಪಾಷ ಮತ್ತಿತರರಿದ್ದರು.