
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04: ಸುಪ್ರೀಂ ಕೋರ್ಟ್ ಆದೇಶದಂತೆ ನನಗೆ ತಕ್ಷಣ ಪರಿಹಾರವನ್ನು ಶಾಲೆಯ ಆಡಳಿತ ಮಂಡಳಿ ನೀಡಬೇಕು ಇಲ್ಲದಿದ್ದರೆ ಮತ್ತೆ ಹೋರಾಟ ಹಾಗು ನ್ಯಾಯಾಂಗದ ಮೊರೆ ಹೋಗಲಿದೆಂದು ಆರ್ ಹೆಚ್ ಎಂ ಚನ್ನಬಸವ ಸ್ವಾಮಿ ಆಗ್ರಹಿಸಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ನಗರದ ಗುಗ್ಗರ ಹಟ್ಟಿಯ ಪಂಚಾಚಾರ್ಯ ಪ್ರೌಡಶಾಲೆ ಯಲ್ಲಿ ಎರೆಡು ವರ್ಷ ಸೇವೆ ಸಲ್ಲಿಸಿದ್ದ ನನಗೆ ಆಡಳಿತ ಮಂಡಳಿಯವರು ವಿನಾಕಾರಣ ಉಜ್ಜನಿ ಶಾಲೆಗೆ ವರ್ಗಾವಣೆ ಮಾಡಿದ್ದರು.
ಅಲ್ಲಿ ನನಗೆ ಹುದ್ದೆ ಇಲ್ಲದಿದ್ದರಿಂದ ವೇತನ ನೀಡಲಿಲ್ಲ. ಕೇಳಿಕದ್ದಕ್ಕೆ ನಾನು ರಾಜೀನಾಮೆ ನೀಡಿರುವೆನೆಂದು ನಕಲಿ ದಾಖಲೆ ಸೃಷ್ಟಿಸಿದ್ದರು. ಅದನ್ನು ನಾನು ಹೋರಾಟ ಮಾಡಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿತ್ತು ನ್ಯಾಯಾಲಯ ವಿಚಾರಣೆ ನಡೆಸಿ 2026. ಜನವರಿಯಲ್ಲಿ 1 ಕೋಟಿ 50 ಲಕ್ಷ ರೂ ಪರಿಹಾರ ನೀಡುವಂತೆ ಆದೇಶ ನೀಡಿದೆ.
ಮೂರು ತಿಂಗಳಲ್ಲಿ ಈ ಪರಿಹಾರ ನೀಡಲು ಆದೇಶ ನೀಡಿತ್ತು. ಆದರೆ 8 ತಿಂಗಳಾದರೂ ಪರಿಹಾರ ನೀಡಿಲ್ಲ. ಕೊಡಿಸಲು ಸಕ್ಷಮ ಪ್ರಾಧಿಕಾರ ಸರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ.
ಈಗ್ಗೆ 37 ವರ್ಷ ಆಯ್ತು ನಾನು ವೇತನ ಇಲ್ಲದೆ ಸಂಕಷ್ಟದಲ್ಲಿರುವ ನನಗೆ ತಕ್ಷಣ ಪರಿಹಾರ ನೀಡಬೇಕು
ಉಜ್ಜಯನಿ ಶಾಲೆಯ ಆಡಳಿತ ಮಂಡಳಿಯಿಂದ ನೀಡಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಇಂದು ವಿಜಯನಗರ ಡಿಡಿಪಿಐ ಅವರು ಪರಿಹಾರ ನೀಡಲು ಆದೇಶ ನೀಡದಿದ್ದರೆ ನಾಳೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ನಿವೃತ್ತ ಶಿಕ್ಷಕ ಸಿ.ಎಂ. ಗಂಗಾಧರಯ್ಯ, ನಿವೃತ್ತ ಪ್ರಾಂಶುಪಾಲ
ವಿ.ಎಸ್ ಪ್ರಭಯ್ಯ ಅವರು ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕರಿಗೆ ಆಗಿರುವ ಇಂತಹ ಅನ್ಯಾಯ ಸತರಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕರ ಮುಂದಾಗಬೇಕು ಎಂದರು.





















