Home ಜಿಲ್ಲೆ ಸರ್ಕಾರ ಕಾರ್ಮಿಕರ ಬೇಡಿಕೆ, ಮೂಲಭೂತ ಹಕ್ಕುಗಳ ರಕ್ಷಣೆಗೆ ಮನವಿ

ಸರ್ಕಾರ ಕಾರ್ಮಿಕರ ಬೇಡಿಕೆ, ಮೂಲಭೂತ ಹಕ್ಕುಗಳ ರಕ್ಷಣೆಗೆ ಮನವಿ

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ:ಸೆ.28 ಕಾರ್ಮಿಕರ ಬೇಡಿಕೆಗಳ ಕುರಿತು ಚರ್ಚಿಸಲು ಸಭೆ ಕರೆಯಲು ಸರ್ಕಾರಕ್ಕೆ ಶಾಸಕರ ಒತ್ತಾಯಿಸಬೇಕೆಂದು ಆಗ್ರಹಿಸಿ   ಸಿಐಟಿಯು ತಾಲೂಕು ಸಮಿತಿ ನೇತೃತ್ವದಲ್ಲಿ ಗ್ರಾಪಂ ನೌಕರರ ಹಾಗೂ ಕಾರ್ಮಿಕರ ಸಂಘಟನೆಗಳಿಂದ ಶಾಸಕರ ಮನೆಮುಂದೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಶಾಸಕ ನೇಮಿರಾಜ್ನಾಯ್ಕ ಗೈರು ಹಿನ್ನೆಲೆ   ಪತ್ನಿ ವಾಣಿ ನೇಮಿರಾಜ್ನಾಯ್ಕ ಮತ್ತು ಆಪ್ತ ಸಹಾಯಕ ನಾಗರಾಜ ಬ್ಯಾಟಿಗೆ ಭಾನುವಾರ ಮನವಿ ಸಲ್ಲಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ ಮಾತನಾಡಿ, ರಾಜ್ಯದ ಕಾರ್ಮಿಕರ ಬದುಕು, ಮೂಲ ಭೂತ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರ್ಕಾರದ್ದು. ಸಂವಿಧಾನ ಕಾರ್ಮಿಕರ ಕುರಿತು ನೀತಿಗಳನ್ನು ರೂಪಿಸಲು ರಾಜ್ಯ ಸರ್ಕಾರ ಮೂಲಭೂತ ಹಕ್ಕನ್ನು ರಕ್ಷಿಸಬೇಕಿದೆ ಎಂದರು. ಸಂಚಾಲಕ ಎಸ್.ಜಗನ್ನಾಥ್ ಮಾತನಾಡಿ, ಗ್ರಾಪಂ ನೌಕರರ ಪರಿಷ್ಕೃತ ಕನಿಷ್ಟ ವೇತನ ಜಾರಿಗೊಳಿಸಬೇಕು. ನೌಕರರನ್ನು ಖಾಯಂ ಮಾಡಿ ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು. ಕಾಂಗ್ರೇಸ್ ಸರ್ಕಾರದ ಭರವಸೆಯಂತೆ ಬಿಸಿಯೂಟ ನೌಕರರಿಗೆ 7ಸಾವಿರ ರೂ., ವಸತಿ ರಹಿತ ಕಾರ್ಮಿಕರಿಗೆ ವಸತಿ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ಈ   ಸಂದರ್ಭದಲ್ಲಿ ಸಂಘಟನೆಯ ಕೆ ಗೌರಮ್ಮ, ಮಲ್ಲಮ್ಮ,ಸುನಂದ, ಅಣ್ಣಾಳಮ್ಮ, ಕರಿಬಸಮ್ಮ, ಬಸಮ್ಮ, ಶೋಭಾ,ಕೆ ಲಕ್ಷ್ಮಣ, ಅಶೋಕ,ಭರತೇಶ, ನಾಗರಾಜ ಕಲ್ಲಪ್ಪ,ಸುರೇಶ್, ಮಾರುತಿ