Home ಜಿಲ್ಲೆ ಮೈಸೂರು ಸಂವಿಧಾನ ದತ್ತವಾಗಿ ಚುನಾವಣಾ ಆಯೋಗದಿಂದ ಎಸ್‍ಐಆರ್ ನಿರ್ವಹಣೆ: ಎನ್.ಮಹೇಶ್

ಸಂವಿಧಾನ ದತ್ತವಾಗಿ ಚುನಾವಣಾ ಆಯೋಗದಿಂದ ಎಸ್‍ಐಆರ್ ನಿರ್ವಹಣೆ: ಎನ್.ಮಹೇಶ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.09-
ಕೇಂದ್ರ ಚುನಾವಣಾ ಆಯೋಗವು ಸಂವಿಧಾನ ದತ್ತವಾದ ಅಧಿಕಾರವನ್ನು ಬಳಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಎಸ್‍ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ದೇಶದ್ಯಂತ ಪಿತೂರಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ವಾಗ್ದಾಳಿ ಮಾಡಿದರು.


ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯು 20 ವರ್ಷಗಳಿಗೊಮ್ಮೆ ಬರುತ್ತದೆ. ಇದು ಬಿಜೆಪಿ ಸರ್ಕಾರ ಬಂದ ನಂತರ ಬಂದಿದಲ್ಲ. ಜೊತೆಗೆ ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಮಾಡುತ್ತಿದೆ. ಆದರೆ ಅಲ್ಲಿ ಕಾಂಗ್ರೆಸ್ ತನ್ನ ಮತದಾರರ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕೆ ವಿನಯ ಬಿಜೆಪಿ ಅವರು ನಮ್ಮ ಮತಗಳನ್ನು ಅಕ್ರಮವಾಗಿ ತೆಗೆದು ಹಾಕುತ್ತಿದ್ದಾರೆ ಎಂದು ದೆಹಲಿಯಿಂದ ಕರ್ನಾಟಕದವರೆಗೆ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ದೂರಿದರು.


ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಬ್ಬರಿಗೆ ಒಂದೇ ಓಟು. ಇದನ್ನು ಜಾರಿ ಮಾಡಲು ಇಂತಹ ಎಸ್‍ಐಆರ್ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಕಾಲದಲ್ಲಿ ಇತ್ತು. ಆದರೆ, ಅವರು ಅಧಿಕಾರದಲ್ಲಿದ್ದಾಗ ಇದ್ಯಾವುದನ್ನು ಪ್ರಾಮಾಣಿಕವಾಗಿ ಮಾಡದ ಪರಿಣಾಮ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಬಂತು, ದೇಶÀ ವಾಸಿಗಳಲ್ಲದವರಿಗೆ ಮತದಾನ ಹಕ್ಕು ನೀಡುವ ಮೂಲಕ ದೇಶವನ್ನು ಸಂಕಷ್ಟಕ್ಕೆ ದೂಡಿದ್ದು ಕಾಂಗ್ರೆಸ್ ಎಂದು ದೂರಿದರು.
ಆದರೆ, ಈಗ ರಾಹುಲ್ ಗಾಂಧಿಯಿಂದ ಸಚಿವ ಪುಟ್ಟರಂಗಶೆಟ್ಟರವರೆಗೆ ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ಧಾರೆ. ಯಾವುದೇ ಮತಗಟ್ಟೆಯಲ್ಲಿ ಹೆಸರು ಸೇರ್ಪಡೆ ಮಾಡಲು ಸೂಕ್ತ ದಾಖಲಾತಿಗಳನ್ನು ನೀಡಿ, ಸರಿಪಡಿಸಲು ಅವಕಾಶವನ್ನು ಆಯೋಗವೇ ನೀಡಿದೆ. ಇನ್ನು ಪ್ರತಿಭಟನೆ ಮಾಡುವ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದರು.


ದೇಶದಲ್ಲಿರುವ 97 ಕೋಟಿ ಮತದಾರರಲ್ಲಿ 13 ಕೋಟಿ ಮತದಾರರನ್ನು ಅನರ್ಹ ಎಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ 18 ಕೋಟಿ ಮತದಾರರಲ್ಲಿ 5.37 ಲಕ್ಷ ಮತದಾರವನ್ನು ಅನರ್ಹರಾಗಿದ್ದಾರೆ. 13 ಕೋಟಿ ಅನರ್ಹ ಮತದಾರರನ್ನು ದೇಶದಲ್ಲಿರುವ 10.50 ಲಕ್ಷ ಬೂತ್‍ಗಳಿಗೆ ವಿಂಗಡನೆ ಮಾಡಿದರೆ, ಪ್ರತಿ ಬೂತ್‍ಗಳಿಗೆ ಸರಾಸರಿ 123 ಮತದಾರರು ಬರುತ್ತಾರೆ. ಆದೇ ರೀತಿ ರಾಜ್ಯಕ್ಕೆ ಹೋಲಿಕೆ ಮಾಡಿದರೆ, 58,282 ಬೂತ್‍ಗಳಿಗೆ 185 ಮತದಾರರು ಬರುತ್ತಾರೆ. ಅದನ್ನು ಯಾವ ಕಾರಣಕ್ಕೆ ಡಿಲಿಟ್ ಮಾಡಲಾಗಿದೆ ಎಂಬುದನ್ನು ಗಮನಿಸಿದರೆ ಪರಿಷ್ಕರಣೆ ವೇಳೆ ಅವರು ಇಲ್ಲದಿರುವುದು, ಬೇರೆ ಕಡೆಗೆ ಶಿಫ್ಟ್ ಆಗಿರುವುದು, ಮರಣ ಹೊಂದಿರುವುದು, ನಕಲಿ ಹಾಗು ಇತರೇ ಕಾರಣ ಕಂಡು ಬರುತ್ತದೆ. ಅದ್ದರಿಂದ ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಮಹೇಶ್ ಸ್ಪಷ್ಟಪಡಿಸಿದರು.


ಸಚಿವ ಪುಟ್ಟರಂಗಶೆಟ್ಟಿ ಅವರು ಜಿಲ್ಲೆಯಲ್ಲಿ 88,277 ಮತದಾರರು ಡಿಲಿಟ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅದನ್ನು 983 ಬೂತ್‍ಗಳಿಗೆ ವಿಂಗಡಣೆ ಮಾಡಿದರೆ ಪ್ರತಿ ಬೂತ್‍ಗೆ 49 ಮತದಾರರು ಬರಲಿದೆ. ಅಲ್ಲದೇ ಇದೇ ಶೆಟ್ಟರು ಸರಗೂರು ಮೋಳೆಯಲ್ಲಿ 40 ಮತದಾರರನ್ನು ತೆಗೆದುಹಾಕಲಾಗಿತ್ತು ಅವರನ್ನು ನಾವು ಮತ್ತೆ ಸೂಕ್ತ ದಾಖಲಾತಿಗಳನ್ನು ನೀಡಿ ಸೇರ್ಪಡೆ ಮಾಡಿದ್ದೇವೆ ಎಂದು ಹೇಳುವ ಸಚಿವರು ಉಳಿದವರನ್ನು ಸಹ ಅದೇ ರೀತಿ ಮಾಡಬೇಕಲ್ಲವೇ ಎಂದು ಮಹೇಶ್ ತಿರುಗೇಟು ನೀಡಿದರು.
ಬಿಎಲ್‍ಎ 1ಗಳೇ ಶಾಸಕರು ; ಸಭೆಗೆ ಮಾತ್ರ ಹೋಗಲ್ಲ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್‍ಎ 1ಗಳಾಗಿ ಶಾಸಕರನ್ನು ನೇಮಕ ಮಾಡಲಾಗಿದೆ. ಜೊತೆಗೆ ಯಾವುದೇ ಚುನಾವಣಾ ಪ್ರಕ್ರಿಯೆಗಳು ನಡೆಯಬೇಕಾದರೆ ಇವರಿಗೆ ಮಾಹಿತಿ ಹೋಗುತ್ತದೆ. ಇದುವರೆಗೆ ಬಿಎಲ್‍ಎ 1 ಆಗಿರುವ ಶಾಸಕರು ಡಿಸಿ ಅಧ್ಯಕ್ಷತೆಯಲ್ಲಿ ನಡೆಯುವ ಎಷ್ಟು ಸಭೆಗಳಿಗೆ ಹೋಗಿ ಸಲಹೆ ಸೂಚನೆ ನೀಡಿದ್ದಾರೆ. ಕೇವಲ ವಿರೋಧ ಮಾಡುವುದಕ್ಕೆ ಎಸ್‍ಐಆರ್ ವಿರುದ್ದ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಷಡ್ಯಂತರ ಮಾಡುತ್ತಿದ್ದಾರೆ ಎಂದು ದೂರುತ್ತಿರುವ ಕಾಂಗ್ರೆಸ್ಸಿಗರು ಏಕೆÀ ಕೈಕಟ್ಟಿ ಕುಳಿತಿದ್ದಾರೆ. ಅವರು ಸಹ ಸೂಕ್ತ ದಾಖಲಾತಿಗಳನ್ನು ನೀಡಿ, ಸೇರ್ಫಡೆ ಮಾಡಿಸಲಿ ಎಂದು ನಿರಂಜನ್‍ಕುಮಾರ್ ಸವಾಲು ಹಾಕಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‍ಕುಮಾರ್, ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗಣರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮುಖಂಡರಾದ ಎಂ.ರಾಮಚಂದ್ರ, ನೂರೊಂದುಶೆಟ್ಟಿ, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್ ಇದ್ದರು.