Home ಜಿಲ್ಲೆ ಮೈಸೂರು ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿಗೆ ದಸರಾ ಯುವ ಸಂಭ್ರಮದ ಸಡಗರ

ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿಗೆ ದಸರಾ ಯುವ ಸಂಭ್ರಮದ ಸಡಗರ

ಸಂಜೆವಾಣಿ ವಾರ್ತೆ
ಮಂಡ್ಯ: ಅ.13-
ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಆಯೋಜಿ ಸಿರುವ ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ಜಿಲ್ಲೆಯ ವಿವಿಧ ಕಾಲೇಜು ಗಳ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.


ದಸರಾ ಹಬ್ಬವು ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಪಯಣದ ಸಂಕೇತವಾಗಿದೆ ಎಂದು ಖ್ಯಾತ ನಟಿ ಅದಿತಿ ಪ್ರಭುದೇವ್ ಅಭಿಪ್ರಾಯ ಪಟ್ಟರು.
ಯುವ ಪ್ರತಿಭೆಗಳಿಗೆ ಇಂತಹ ದೊಡ್ಡ ವೇದಿಕೆ ದೊರೆತಿರು ವುದು ಅದೃಷ್ಟದ ಸಂಗತಿ. ಅನೇಕ ಪ್ರತಿಭೆಗಳು ತಮ್ಮ ಸಾಮಥ್ರ್ಯ ಪ್ರದರ್ಶಿಸಲು ಸೂಕ್ತ ವೇದಿಕೆಗಾಗಿ ಕಾಯುತ್ತಿ ರುವ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ವಿದ್ಯಾರ್ಥಿಗಳಿಗೆ ಈ ಅವಕಾಶ ಲಭಿಸಿದೆ. ವಿದ್ಯಾರ್ಥಿಗಳು ಈ ವೇದಿಕೆಯನ್ನು ಸದುಪ ಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಅವರು ಕರೆ ನೀಡಿದರು.


ದಸರಾ ಉತ್ಸವದ ಐತಿಹಾಸಿಕ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಅವರು, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಕಾಲದಲ್ಲಿ ಆರಂಭವಾದ ದಸರಾ ಉತ್ಸವವನ್ನು ನಂತರ 16ನೇ ಶತಮಾನದಲ್ಲಿ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣಕ್ಕೆ ತಂದರು. ಹೀಗಾಗಿ ದಸರಾ ಆಚರಣೆಯ ಇತಿಹಾಸದಲ್ಲಿ ಶ್ರೀರಂಗಪಟ್ಟಣಕ್ಕೆ ವಿಶೇಷ ಸ್ಥಾನವಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಡ್ಯ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಅವರನ್ನು ಶ್ಲಾಘಿಸಿದ ಅದಿತಿ ಪ್ರಭುದೇವ್,ಮಹಿಳೆಯರು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಮಹಿಳಾ ಸಬಲೀಕರಣದ ಸಂಕೇತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರಿಯಾಶೀಲ ಚಿಂತನೆಯ ಫಲ ಯುವ ಸಂಭ್ರಮ:ಜಿಲ್ಲಾಧಿಕಾರಿ ಡಾ. ಕುಮಾರ
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ್, ಶ್ರೀರಂಗಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಯುವ ಸಂಭ್ರಮ ಆಯೋಜಿಸ ಲಾಗಿದ್ದು, ಈ ಹಿಂದೆ ಶ್ರೀರಂಗಪಟ್ಟಣ ದಸರಾ ಉತ್ಸವವು ನಾಲ್ಕೈದು ದಿನಗಳಿಗೆ ಸೀಮಿತವಾಗಿತ್ತು ಎಂದು ತಿಳಿಸಿದರು.


ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಕ್ರಿಯಾಶೀಲ ಚಿಂತನೆಯ ಫಲವಾಗಿ ಈ ವಿನೂತನ ಕಾರ್ಯಕ್ರಮ ರೂಪು ಗೊಂಡಿದೆ. ಜಿಲ್ಲೆಯ ಯುವಜನರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂಬ ಉದ್ದೇಶ ದಿಂದ ಯುವ ಸಂಭ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮೆರುಗು ತಂದ ನಟಿ ಅದಿತಿ ಪ್ರಭುದೇವ್ ಹಾಗೂ ಆಯೋಜನೆಗೆ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರತಿ ಕಾಲೇಜು ತಂಡಕ್ಕೆ 15 ಸಾವಿರ ಬಹುಮಾನ ಘೋಷಣೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ,ಪ್ರತಿಭೆ ಇದ್ದರೆ ಮಾತ್ರ ಸಾಲದು; ಅದನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯೂ ದೊರೆಯ ಬೇಕು.ಇಲ್ಲದಿದ್ದರೆ ಪ್ರತಿಭೆಗಳು ಬೆಳಕಿಗೆ ಬಾರದೆ ಉಳಿಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ಯುವಜನರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಉದ್ದೇಶ ದಿಂದ ಯುವ ಸಂಭ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿನ ಹಿಂದೆ ಯುವ ಸಂಭ್ರಮ ಸಮಿತಿಯ ಸದಸ್ಯರಾದ ಕಲ್ಪಶ್ರೀ, ಲಕ್ಷ್ಮಿ ಹಾಗೂ ಅವರ ತಂಡದ ಬದ್ಧತೆ ಮತ್ತು ಪರಿಶ್ರಮವಿದೆ ಎಂದು ಶ್ಲಾಘಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಯುವ ಸಂಭ್ರಮ ಸಮಿತಿ ಸದಸ್ಯರಾದ ಕಲ್ಪಶ್ರೀ, ಲಕ್ಷ್ಮಿ, ದಿನೇಶ್, ಕಿರಣ್ ಸೇರಿದಂತೆ ಜನಪ್ರತಿನಿಧಿ ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿ ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯ ಕ್ರಮಕ್ಕೂ ಮುನ್ನ ಹಾಗೂ ನಂತರ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಪ್ರದರ್ಶನ ನೀಡುವ ಮೂಲಕ ದಸರಾ ಯುವ ಸಂಭ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದರು.