Home ಜಿಲ್ಲೆ ರಾಷ್ಟ್ರೀಯ ಪೋಷಣ ಮಾಸಾಚರಣೆ

ರಾಷ್ಟ್ರೀಯ ಪೋಷಣ ಮಾಸಾಚರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಸೆ.18:  ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ‘ಪೋಷಣ್ ಅಭಿಯಾನ’ದ ಅಡಿಯಲ್ಲಿ ಪ್ರತಿ ವರ್ಷ ಆಚರಿಸಲಾಗುವ 30 ದಿನಗಳ ರಾಷ್ಟ್ರೀಯ ಜಾಗೃತಿ.ಅಭಿಯಾನದ

 ಕಾರ್ಯಕ್ರಮದಲ್ಲಿ. ಉಪ ನಿರ್ದೇಶಕರಾದ ಗಂಗಪ್ಪ.ಹಾಗು ಮೇಲ್ವಿಚಾರಕಾರದ ಶ್ರೀಮತಿ ಲಕ್ಷ್ಮೀ ದೇವಿ. ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ.ಶ್ರೀಮತಿ ವಿದ್ಯಾ.ಲಿಂಗ ತಜ್ಞನರಾದ ಶ್ರೀ ಮತಿ ಅನ್ನಪೂರ್ಣ. ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.

ಜಿಲ್ಲಾ ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಧರ್ಮನಗೌಡ ಇಲಾಖೆಯ ಸಂಪೂರ್ಣ  ಮಾಹಿತಿ ನೀಡಿದರು.

ಅಪೌಷ್ಟಿಕತೆ ನಿರ್ಮೂಲನೆ: ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ತಡೆಗಟ್ಟುವುದು. ಸಮುದಾಯದ ಪಾಲ್ಗೊಳ್ಳುವಿಕೆ: ಸಾರ್ವಜನಿಕರಲ್ಲಿ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸಿ ‘ಜನ ಆಂದೋಲನ’ವನ್ನು ರೂಪಿಸುವುದು. ಮೊದಲ 1000 ದಿನಗಳ ಆರೈಕೆ: ಮಗುವಿನ ಗರ್ಭಾವಸ್ಥೆಯಿಂದ ಹಿಡಿದು 2 ವರ್ಷಗಳವರೆಗಿನ (ಮೊದಲ 1,000 ದಿನಗಳು) ಸೂಕ್ತ ಪೋಷಣೆ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದು ಎಂದು ತಿಳಿಸಿದರು.

ಪ್ರಮುಖ ಚಟುವಟಿಕೆಗಳು

ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಸಮತೋಲಿತ ಹಾಗೂ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡುವುದು.

ಆರೋಗ್ಯ ತಪಾಸಣೆ: ಮಕ್ಕಳ ಎತ್ತರ, ತೂಕದ ಅಳತೆ (ಮಗುವಿನ ಬೆಳವಣಿಗೆ ಮೇಲ್ವಿಚಾರಣೆ) ಮತ್ತು ಆರೋಗ್ಯ ಶಿಬಿರಗಳ ಆಯೋಜನೆ.

ಪೋಷಣ್ ಟ್ರ್ಯಾಕರ್  ತಂತ್ರಜ್ಞಾನದ ಮೂಲಕ ತಾಯಿ ಮತ್ತು ಮಗುವಿಗೆ ತಲುಪುವ ಆರೋಗ್ಯ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಮೇಲ್ವಿಚಾರಣೆ ಮಾಡುವುದು. ಇದರ ಜೊತೆಯಲ್ಲಿ ಬೇಟಿ ಬಚಾವೋ ಬೇಟಿ ಪಡವೋ.ಲಿಂಗ ಪಕ್ಷಪಾತ ತೊಲಗಿಸಿ.ಹೆಣ್ಣುನ್ನು ಉಳಿಸಿ.ಹೆಣ್ಣುನ್ನು ಬೆಳಸಿ ಹೆಣ್ಣು ಮಕ್ಕಳಿಗೆ ಓದಿಸಿ. ಹಾಗೂ ಮಾತೃವಂದನಾ.ಭಾಗ್ಯ ಲಕ್ಷ್ಮೀ. ಸುಕನ್ಯಾ ಸಂವೃದ್ದಿಯೋಜನೆ. ಯೋಜನೆಗಳ ಬಗ್ಗೆ ಗರ್ಭಿಣಿ ಮಹಿಳೆಯರಿಗೆ.ತಾಯಂದಿರಿಗೆ. ಮತ್ತು ಕಿಶೋರಿಯರಿಗೆ ಅರೋಗ್ಯ ಸಂಬಂಧಿಸಿದ ಮಾಹಿತಿ ನೀಡಲಾಯಿತು.