Home ಜಿಲ್ಲೆ ಮೈಸೂರು ಮೈಸೂರು ಯುವ ಸಂಭ್ರಮದಲ್ಲಿ ಮಿಂಚಿದ ಮಳವಳ್ಳಿ ಕಾಲೇಜು ವಿದ್ಯಾರ್ಥಿಗಳ ನೃತ್ಯ

ಮೈಸೂರು ಯುವ ಸಂಭ್ರಮದಲ್ಲಿ ಮಿಂಚಿದ ಮಳವಳ್ಳಿ ಕಾಲೇಜು ವಿದ್ಯಾರ್ಥಿಗಳ ನೃತ್ಯ

ಸಂಜೆವಾಣಿ ವಾರ್ತೆ
ಮಳವಳ್ಳಿ ಸೆ. 30.
ಮೈಸೂರಿನಲ್ಲಿ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಳವಳ್ಳಿಯ ವಿದ್ಯಾರ್ಥಿಗಳು `ಐತಿಹಾಸಿಕ ಪರಂಪರೆ’ ವಿಷಯಾಧಾರಿತ ಅದ್ಭುತ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.


ನೃತ್ಯ ಪ್ರದರ್ಶನದಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಉಮಾ ಎಸ್. ಅವರು ಚಾಮುಂಡೇಶ್ವರಿ ಪಾತ್ರದಲ್ಲಿ ಹಾಗೂ ಪ್ರಥಮ ಬಿ.ಕಾಂ ವಿದ್ಯಾರ್ಥಿ ಶಶಿಧರ್ ಅವರು ಮಹಿಷಾಸುರನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು. ಇವರೊಂದಿಗೆ ಕಾಲೇಜಿನ ಇತರ ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಹೆಜ್ಜೆ ಹಾಕಿ ನೃತ್ಯಕ್ಕೆ ಮೆರುಗು ತಂದರು.
ವಿದ್ಯಾರ್ಥಿಗಳ ಅತ್ಯುತ್ತಮ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಯುವ ಸಂಭ್ರಮ ಸಮಿತಿಯ ವತಿಯಿಂದ ನೃತ್ಯದ ಕೊರಿಯೋಗ್ರಾಫರ್ ನವೀನ್ ಅವರನ್ನು ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ಡಿ., ಸಾಂಸ್ಕೃತಿಕ ಸಂಚಾಲಕರಾದ ನರಸೇಗೌಡ ಕೆ. ಹಾಗೂ ಕಚೇರಿ ಸಹಾಯಕ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಮನು ಬೆಳಕವಾಡಿ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಿದರು.