
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಜೂ.08 ತಾಲೂಕಿನ ಹಂಪಾಪಟ್ಟಣ ಗ್ರಾಮ ಪಂಚಾಯಿತಿ ಹಾಗೂ ಪಶುಸಂಗೋಪನೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬೀದಿ ನಾಯಿಗಳಿಗೆ ರೇಬೀಸ್ ಲಸಿಕಾ ಚುಚ್ಚುಮದ್ದು ಹಾಕಲಾಯಿತು.
ಸರ್ಕಾರಿ ಪಶು ಆಸ್ಪತ್ರೆ ಹತ್ತಿರ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಗ್ರಾಮದ ಸಾಕು ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಯಿತು. 30ಕ್ಕೂ ಹೆಚ್ಚು ನಾಯಿಗಳಿಗೆ ರೇಬೀಸ್ ಲಸಿಕೆ ನೀಡುವ ಮೂಲಕ ರೋಗ ನಿಯಂತ್ರಣ ಮಾಡಲಾಗಿದೆ..
ಇತ್ತೀಚಿಗೆ ಗ್ರಾಮದಲ್ಲಿ ಹುಚ್ಚುನಾಯಿ ದಾಳಿಯಿಂದ ಏಳು ಜನರು ಗಂಭೀರ ಗಾಯಗೊಂಡಿದ್ದರು, ರೆಬಿಸ್ ರೋಗ ಹರಡದಂತೆ ಇಂದು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ,
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತ್ರಿ ಗೀತಾ ಯಲ್ಲಪ್ಪ ಚಾಲನೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖಾಜಾ ಬನ್ನಿ ಮಾತನಾಡಿ ರೇಬಿಸ್ ಎನ್ನುವುದು ಒಂದು ಮಾರಕರೋಗ ಇದು ಹರಡದಂತೆ ತಡೆಯುವ ಕಾಯಕವನ್ನು ನಾವೆಲ್ಲರೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾಡಬೇಕಾಗಿದೆ. ಪ್ರತಿಯೊಂದು ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಕಡ್ಡಾಯವಾಗಿ ಹಾಕಿಸಿದರೆ ಗ್ರಾಮದಲ್ಲಿ ರೆಬಿಸ್ ಸೋಂಕಿನ ನಾಯಿಗಳು ಇರುವುದಿಲ್ಲ, ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಪ್ರತಿಯೊಬ್ಬರು ತಮ್ಮ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕಿಸಬೇಕೆಂದು ಮನವಿ ಮಾಡಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಲ್. ಕುಮಾರ್, ಸಿದ್ರು ಗಾಳೆಪ್ಪ, ಪಶು ವೈದ್ಯಾಧಿಕಾರಿ ಡಾ. ಜಿ. ರಾಘವೇಂದ್ರ, ಪಶು ವೈದ್ಯಕೀಯ ಪರೀಕ್ಷಕ ಎ. ಭಾರತಿ, ಮುಖಂಡ ತೀರ್ಥ ಪ್ರಸಾದ್ ಇದ್ದರು.




























