Home ಜಿಲ್ಲೆ ಬಾಕಿ ವೇತನ ಬಿಡುಗಡೆಗಾಗಿ ಬಿಸಿಯೂಟ ಕಾರ್ಮಿಕರಿಂದ ಜಿಪಂ ಕಚೇರಿ ಮುಂದೆ ಧರಣಿ

ಬಾಕಿ ವೇತನ ಬಿಡುಗಡೆಗಾಗಿ ಬಿಸಿಯೂಟ ಕಾರ್ಮಿಕರಿಂದ ಜಿಪಂ ಕಚೇರಿ ಮುಂದೆ ಧರಣಿ

oplus_6291458

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ,ಸೆ.18: ತಮಗೆ ನೀಡಬೇಕಿರುವ 2 ತಿಂಗಳ ಬಾಕಿ ವೇತನವನ್ನು ಕೂಡಲೆ ಬಿಡುಗಡೆಗೆ ಆಗ್ರಹಿಸಿ ಇಂದು ಬಿಸಿಯೂಟ ಕಾರ್ಮಿಕರು ನಗರದಲ್ಲಿನ ಜಿಪಂಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಧರಣಿ ನಡೆಸಿ. ನಮ್ಮಲ್ಲಿ ಒಂಟಿ ಮಹಿಳೆಯರು, ವಿಧವೆಯರು ಇದ್ದು, ಈ ವೇತನದ ಮೇಲೆ ಅವಲಂಬಿತರಾಗಿದ್ದೇವೆ. ಜುಲೈ ಹಾಗೂ ಆಗಸ್ಟ್ ತಿಂಗಳುಗಳ ವೇತನ ಬರದೆ, ಜೀವನ ನಡೆಸುವುದೇ ಕಷ್ಟವಾಗಿದೆ. 2 ತಿಂಗಳ ವೇತನ ಬಿಡುಗಡೆ ಮಾಡಲು ಕೂಡಲೆ ಕ್ರಮ ಕೈಗೊಳ್ಳಬೇಕು.

ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆ ಮಾಡಲು ಗಣಿಬಾಧಿತ ಪ್ರದೇಶಗಳಲ್ಲಿ ಕಾಳುಗಳನ್ನು ನೀಡುವ ಯೋಜನೆಯಡಿ ಬಿಸಿಯೂಟಕ್ಕೆ ಮಾಸಿಕ ರೂ.500 ನೀಡಲಾಗುತ್ತದೆ. ಈ ಮೊತ್ತವು ಕಡಿಮೆಯಾಗಿದ್ದು ಹೆಚ್ಚಿಸಬೇಕು.ಪ್ರೋತ್ಸಾಹ ಧನ ಹೆಚ್ಚಿಸಬೇಕು.

ಇದಲ್ಲದೆ ಹಿಂದಿನ ಶೈಕ್ಷಣಿಕ ವರ್ಷದ 2-3 ತಿಂಗಳು ಹಾಗೂ ಈ ಶೈಕ್ಷಣಿಕ ವರ್ಷದ 3 ತಿಂಗಳ ಕಾಳಿನ ಮೊತ್ತ ಇನ್ನೂವರೆಗೆ ನೀಡಿಲ್ಲ. ಇನ್ನು ಮುಂದೆ ಈ ಮೊತ್ತವನ್ನು ಮುಖ್ಯ ಗುರುಗಳ ಖಾತೆಯ ಬದಲಿಗೆ ಬಿಸಿಯೂಟ ಕಾರ್ಮಿಕರ ಖಾತೆಗೆ ನೇರವಾಗಿ ಜಮಾ ಮಾಡಬೇಕೆಂಬುದು ಆಗ್ರಹಿಸಿದರು.

ವರ್ಷಗಳಿಂದ ಮೊಟ್ಟೆ ಸುಲಿದ ಹಣವೂ ಬರುತ್ತಿಲ್ಲ. ದಿನವೂ ನೂರಾರು ಮೊಟ್ಟೆ ಸುಲಿದು ಶ್ರಮ ಹಾಕುತ್ತಾರೆ, ಆದರೆ ಅವರ ಶ್ರಮಕ್ಕೆ ತಕ್ಕನಂತ ಪ್ರತಿಫಲ ದೊರೆಯುತ್ತಿಲ್ಲ. ಮೊಟ್ಟೆ ಸುಲಿದ ಹಣ ಮುಖ್ಯ ಗುರುಗಳ ಖಾತೆಗೆ ಹಾಕಲಾಗುತ್ತದೆ. ಆದರೆ ಈ ಹಣ ಬಿಸಿಯೂಟ ಕಾರ್ಮಿಕರಿಗೆ ತಲುಪುತ್ತಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಸಂಬಂಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದಾಗಲೂ ಯಾವುದೇ ಪ್ರಯೋಜನ ಆಗಿಲ್ಲ.

ಅದಕ್ಕಾಗಿ ಬಿಸಿಯೂಟ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆದು, ಬಿಸಿಯೂಟ ಕಾರ್ಮಿಕರ ಸಮಸ್ಯೆಗಳ ಕುರಿತ ವಿಸ್ತ್ರತ ಚರ್ಚೆ ನಡೆಸಬೇಕು ಎಂದು ಆಗ್ರಹಿಸಲಾಯ್ತು.