
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.28: ಜಾಸ್ಮಿನ್ ಮುಸ್ಲಿಂ ಮ್ಯಾರೇಜ್ ಕಾನ್ಸುಲ್ಟೆನ್ಸಿಯಿಂದ ಬೆಂಗಳೂರಿನ ಹಜರತ್ ತವಕಲ್ ಮಸ್ತಾನ್ ದರ್ಗಾದಲ್ಲಿ ಶಾದಿ ಮೇಳ ನಡೆಸಲಾಯ್ತು. 70ಕ್ಕೂ ಅಧಿಕ ಯುವಕ–ಯುವತಿಯರು ಇದರಲ್ಲಿ ಪಾಲಕರ ಪಾಲ್ಗೊಂಡಿದ್ದರು.
ಮುಸ್ಲಿಂ ಸಮುದಾಯದ ಯುವಕ–ಯುವತಿಯರಿಗೆ ಸೂಕ್ತ ಜೀವನ ಸಂಗಾತಿಯನ್ನು ಹುಡುಕಲು ನೆರವಾಗುವ ಉದ್ದೇಶದಿಂದ ಈ ಶಾದಿ ಮೇಳ ಆಯೋಜಿಸಲಾಗಿತ್ತು.
ವಿವಾಹ ಸಂಬಂಧದ ಕುರಿತು ಯುವಕ–ಯುವತಿಯರು ಹಾಗೂ ಅವರ ಕುಟುಂಬಸ್ಥರು ನೇರವಾಗಿ ಭೇಟಿಯಾಗಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇದು ವೇದಿಕೆಯಾಗಿತ್ತು.
ಜಾಸ್ಮಿನ್ ಮುಸ್ಲಿಂ ಮ್ಯಾರೇಜ್ ಕಾನ್ಸುಲ್ಟೆನ್ಸಿ ಅಧ್ಯಕ್ಷ ಬಿ.ಎಂ. ರಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾದಿ ಮೇಳದಲ್ಲಿ ಅವರು ಮಾತನಾಡಿ.
ವಿವಾಹ ಸಂಬಂಧ ಕಲ್ಪಿಸುವ ಸೇವೆಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳಲ್ಲಿಯೂ ಸಂಸ್ಥೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ ಎಂದರು.
.ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಕುಟುಂಬಗಳ ಮಕ್ಕಳ ವಿವಾಹಕ್ಕೆ ನೆರವು ನೀಡುವುದು, ಅಗತ್ಯವಿರುವವರಿಗೆ ಸಾಧ್ಯವಾದಷ್ಟು ಸಹಾಯಹಸ್ತ ಚಾಚುವುದು ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.ಬಡ ಕುಟುಂಬಗಳ ಮಕ್ಕಳ ಮದುವೆಗೆ ನೆರವು ನೀಡುವ ಮೂಲಕ ವಿವಾಹದ ಸಂದರ್ಭದಲ್ಲಿ ಕುಟುಂಬಗಳ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿಯೂ ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಫಿ ಹೇಳಿದರು.





















