
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.30: ಪಟ್ಟಣದ ಪೆÇಲೀಸ್ ಠಾಣೆಯ ಹಿಂಭಾಗದಲ್ಲಿರುವ ವಸತಿ ಗೃಹಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ವಸತಿ ಗೃಹದ ಪೆÇಲೀಸ್ ಕುಟುಂಬದ ಗೃಹಣಿಯರು ಪೆÇಲೀಸ್ ಠಾಣೆಯ ಆವರಣದಲ್ಲಿ ಖಾಲಿ ಕೊಡಗಳನ್ನಿಟ್ಟು ಪ್ರತಿಭಟಿಸಿದರು.
ಪಟ್ಟಣ ಪೆÇಲೀಸ್ ಠಾಣೆಯ ಹಿಂಭಾಗದಲ್ಲಿರುವ ದೇವಾಸ್ಥಾನದ ಮುಂದೆ ಖಾಲಿಕೊಡಗಳನ್ನಿಟ್ಟು ವಸತಿ ಗೃಹಗಳಿಗೆ ನೀರು ಕೊಡುವಂತೆ ಪೆÇೀಲೀಸ್ ಕುಟುಂಬದ ಗೃಹಣಿಯರು ಆಗ್ರಹಿಸಿದರು. ಪಟ್ಟಣ ಪೆÇಲೀಸ್ ಠಾಣೆಯ ಆವರಣದಲ್ಲಿ 21 ಪೆÇಲೀಸ್ ವಸತಿ ಗೃಹಗಳಿವೆ. ಈ ಮನೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದ ಏಕೈಕ ಕೊಳವೆ ಬಾವಿ ತೀವ್ರ ಬರಗಾಲದಿಂದ ಸ್ಥಗಿತಗೊಂಡಿದೆ. 400 ಅಡಿ ಆಳಕ್ಕೆ ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಇದರ ಪರಿಣಾಮ ಪೆÇಲೀಸ್ ವಸತಿ ಗೃಹಗಳಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರಿನಿಂದ ಹಿಡಿದು ನಿತ್ಯಕರ್ಮಗಳಿಗೆ ನೀರಿನ ಅಭಾವ ಕಾಣಿಸಿಕೊಂಡಿದೆ. ಪುರಸಭೆಯ ವತಿಯಿಂದ ಕುಡಿಯುವ ನೀರು ಪೂರೈಕೆಗೆ ಪೈಪ್ ಲೈನ್ ಇದ್ದರೂ ತಾಂತ್ರಿಕ ಕಾರಣಗಳಿಂದ ಪುರಸಭೆ ಈ ವಸತಿ ಗೃಹಗಳಿಗೆ ನೀರು ಪೂರೈಕೆ ಮಾಡುತ್ತಿಲ್ಲ. ಪೆÇಲೀಸರ ವಸತಿ ಗೃಹಗಳಿಗೆ ನೀರಿನ ಸಮಸ್ಯೆಯಿದ್ದರೂ ಅದರ ಪರಿಹಾರಕ್ಕೆ ಇಲಾಖೆಯ ಅಧಿಕಾರಿಗಳೂ ತುರ್ತು ಕ್ರಮ ವಹಿಸಿಲ್ಲ. ಕನಿಷ್ಠ ಟ್ಯಾಂಕರ್ ಮೂಲಕವಾದರೂ ವಸತಿ ಗೃಹಗಳಿಗೆ ನೀರಿಗೆ ಪೂರೈಕೆ ಮಾಡುತ್ತಿಲ್ಲ. ಇದರಿಂದ ಹತಾಶರಾದ ಪೆÇಲೀಸ್ ಕುಟುಂಬದ ಗೃಹಣಿಯರು ತಮ್ಮ ತಮ್ಮ ಪುಟ್ಟ ಮಕ್ಕಳೊಂದಿಗೆ ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಠಾಣೆಯ ಆವರಣದಲ್ಲಿರುವ ದೇವಾಲಯದ ಮೆಟ್ಟಿಲುಗಳ ಮೇಲೆ ಕುಳಿತು ನೀರಿಗಾಗಿ ಪ್ರತಿಭಟಿಸಿದರು.

























