Home ಜಿಲ್ಲೆ ಪಠ್ಯದ ಜೊತೆ ಸಾಂಸ್ಕೃತಿಕ  ಕಾರ್ಯಕ್ರಮ ಮಕ್ಕಳಿಗೆ  ಮನಸ್ಸಿಗೆ ಉಲ್ಲಾಸ ನೀಡುತ್ತವೆ:  ಮಂಜುನಾಥ

ಪಠ್ಯದ ಜೊತೆ ಸಾಂಸ್ಕೃತಿಕ  ಕಾರ್ಯಕ್ರಮ ಮಕ್ಕಳಿಗೆ  ಮನಸ್ಸಿಗೆ ಉಲ್ಲಾಸ ನೀಡುತ್ತವೆ:  ಮಂಜುನಾಥ

ಸಂಜೆವಾಣಿ ವಾರ್ತೆ

 ಬಳ್ಳಾರಿ, ಸೆ.04 ತಾಲೂಕಿನ ಸಂಗನಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರದಲ್ಲಿ ವೀಣಾ ಶ್ರೀ ಮಹಿಳಾ ಕಲಾಸಂಘ ಸಂಗನಕಲ್ಲು

 ಇವರು ಹಮ್ಮಿಕೊಂಡ ಶ್ರಾವಣ ಸಂಗೀತ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

 ಕಲಿಯುವ ವಯಸ್ಸಿನ ಮಕ್ಕಳಿಗೆ ಮನೆ ಹಾಗೂ ಶಾಲೆಯ ಹಾಗೂ ಶಿಕ್ಷಣದ ಒತ್ತಡದ ನಡುವೆಯೂ ಮಕ್ಕಳಿಗೆ ಮಾನಸಿಕ ನೆಮ್ಮದಿ ಏಕಾಗ್ರತೆ ಹೆಚ್ಚಿಸುವಲ್ಲಿ ಮನೋರಂಜನ ಕಾರ್ಯಕ್ರಮಗಳು ಅವಶ್ಯಕ ಇದರಿಂದ ಮಕ್ಕಳ ಮನಸ್ಸಿಗೆ ಉಲ್ಲಾಸ ನೀಡುವವರೊಂದಿಗೆ ನಮ್ಮ ನಾಡಿನ ಕಲೆ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅವರನ್ನು ಪ್ರೇರೇಪಿಸುವ ಕೆಲಸ ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದು  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಯೆರೆಮ್ಮ ನಡೆಸಿಕೊಟ್ಟರೆ ಮುಖ್ಯ ಅತಿಥಿಗಳಾದ  ಶ್ರೀಮತಿ ರಾಮಾಂಜಿನಮ್ಮ, ಹಾಗೂ ಕಲಾಸಂಘದ ಅಧ್ಯಕ್ಷ ಶ್ರೀಮತಿ ಉಷಾ ಇವರು ಉಪಸ್ಥಿತರಿದ್ದರು ಸಂಗೀತ ಕಾರ್ಯಕ್ರಮವನ್ನು ವೀರೇಶ್ ದಳವಾಯಿ ಅವರು ವಚನ ಗೀತೆ,  ಜಾನಪದ ಗೀತೆ,  ಸಂಗೀತವನ್ನು ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು