
ಸಂಜೆವಾಣಿ ವಾರ್ತೆ
ಬಳ್ಳಾರಿ , ಸೆ,19- ಸ್ಥಳಿಯ ರೇಡಿಯೋ ಪಾರ್ಕ್ ಪ್ರದೇಶದ ಬಾಬು ನಾಯುಡು ಬೀದಿಯಲ್ಲಿ ಗಣೇಶೋತ್ಸವ ದ ಅಂಗವಾಗಿ ಭಾರತಿ ನಾಟ್ಯ ಕಲಾ ಟ್ರಸ್ಟ್ ನಿಂದ ನಾಟ್ಯ ಗಣಪತಿ ಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.. ಗಣೇಶ ಚತುರ್ಥಿ . ಅಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ದಂಪತಿಗಳಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು.
ನಾಲ್ಕ ನೇ ದಿನದ ಸಾಂಸ್ಕೃತಿಕ ಸಮಾರಂಭ ಕ್ಕೆ ಉದ್ಘಾಟಕ ರಾಗಿ ವಿಶ್ವ ಹಿಂದೂ ಪರಿಷತ್ ವಿಭಾಗಿಯ ಕಾರ್ಯದರ್ಶಿ . ಕೆ.ಅಶೋಕ್ ಆಗಮಿಸಿ ವಿವಿಧ ಕ್ಷೇತ್ರ ದಲ್ಲಿ ಸೇವೆ ಸಲ್ಲಿಸಿ ದ ಗಣ್ಯರನ್ನು ಸನ್ಮಾನ ಮಾಡಿ ಗೌರವಿಸಿದರು.
ಸ್ಪದೆ೯ಗಳಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿತು. ಮಕ್ಕಳಿಂದ ನಡೆದ ಭರತನಾಟ್ಯ, ಜನಪದ ನೃತ್ಯ ಗಳು ಮನರಂಜಿಸಿದವು.
ಟ್ರಸ್ಟ್ ಅಧ್ಯಕ್ಷ ಎಂ. ಭೀಮರಾವ್ ಕುಲಕರ್ಣಿಪದಾಧಿಕಾರಿಗಳು ಪಾಲ್ಗೊಂಡಿದ್ದರು





















