Home ಜಿಲ್ಲೆ ಡಿ–7 ಕಾಲುವೆಗೆ ಹೆಚ್ಚಿನ ನೀರು ಹರಿಸಲು ಆಗ್ರಹಿಸಿ ಕುರುಗೋಡಿನಲ್ಲಿ ರೈತರ  ಧರಣಿ

ಡಿ–7 ಕಾಲುವೆಗೆ ಹೆಚ್ಚಿನ ನೀರು ಹರಿಸಲು ಆಗ್ರಹಿಸಿ ಕುರುಗೋಡಿನಲ್ಲಿ ರೈತರ  ಧರಣಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.18:  ತುಂಗಭದ್ರ ಬಲದಂಡೆ ಮೇಲ್ಮಟ್ಟದ ಕಾಲುವೆಯ   ವಿತರಣಾ ಕಾಲುವೆ ಡಿ–7ಕ್ಕೆ 600 ಕ್ಯೂಸೆಕ್ಗೂ ಅಧಿಕ ನೀರು ಹರಿಸಿ  ರೈತರ ಬೆಳೆಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಎಐಕೆಕೆಎಂಎಸ್ ನೇತೃತ್ವದಲ್ಲಿ  ರೈತರು ಇಂದು  ಕುರುಗೋಡಿನ ನೀರಾವರಿ ಇಲಾಖೆಯ ಕಚೇರಿ ಬಳಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಕಾಲುವೆ–7ನ್ನು ಅವಲಂಬಿಸಿರುವ ಸಾವಿರಾರು  ರೈತರು ಇದುವರೆಗೂ ಸಹ ಬೀಜವನ್ನು ಬಿತ್ತಲು ಆಗದ ಪರಿಸ್ಥಿತಿಯಲ್ಲಿ ಇದ್ದಾರೆ. ಇದುವರೆಗೂ ಸಾಕಷ್ಟು ರೈತರ ಭೂಮಿಗೆ ಒಂದು ಹನಿ ಸಹ ನೀರು ತಲುಪಿಲ್ಲ.  ಈಗಾಗಲೇ ಬಿತ್ತಿದ ಬೆಳೆಗಳು ಸಹ  ನೀರಿನ ಕೊರತೆಯಿಂದ ಸಂಕಷ್ಟದಲ್ಲಿವೆ. ರೈತರ ಬೆಳೆ ಸಂಪೂರ್ಣವಾಗಿ ಕೈ ಸೇರುವವರೆಗೆ ಅಗತ್ಯ ಪ್ರಮಾಣದ ನೀರು ಹರಿಸಬೇಕು. ನೀರಿನ ಹಂಚಿಕೆಯಲ್ಲಿ ಕೃಷಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ.  ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಎಚ್ಚರಿಸಿದರು.

 ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ರೈತ ಮುಖಂಡ ಕಲಕಂಬ ಪಂಪಾಪತಿ, ತಾಲೂಕ್ ಕಾರ್ಯದರ್ಶಿ ಬಸವರಾಜ್, ರೈತರಾದ ಕೀರ್ತಿ ರೆಡ್ಡಿ, ನಾಗೇಶ್ವರ, ಹೇಮರೆಡ್ಡಿ, , ಏರಿಸ್ವಾಮಿ, ಮಲ್ಲಿಕಾರ್ಜುನರೆಡ್ಡಿ, ಹನುಮಂತ, ಮಾಬುಸಾಬ್, ನಾರಾಯಣ ರೆಡ್ಡಿ, ಕೃಷ್ಣಾರೆಡ್ಡಿ, ಬಸವನಗೌಡ, ಜಡಪ್ಪ  ಮೊದಲಾದವರು ಪಾಲ್ಗೊಂಡಿದ್ದಾರೆ.