Home ಜಿಲ್ಲೆ ಡಾ.ಬಿ.ಆರ್.ಅಂಬೇಡ್ಕರ್ ಸಂಘಕ್ಕೆ 10 ಲಕ್ಷ ರೂ.ಗಳ ದೇಣಿಗೆ

ಡಾ.ಬಿ.ಆರ್.ಅಂಬೇಡ್ಕರ್ ಸಂಘಕ್ಕೆ 10 ಲಕ್ಷ ರೂ.ಗಳ ದೇಣಿಗೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಸೆ.19:  ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಚಟುವಟಿಕೆಗಳಿಗಾಗಿ ಶಾಸಕ ಭರತ್ ರೆಡ್ಡಿ ವೈಯುಕ್ತಿಕವಾಗಿ 10 ಲಕ್ಷ ರೂ.ಗಳ ದೇಣಿಗೆ ನೀಡಿ. ಸಮುದಾಯದವರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ದಲಿತ ಮುಖಂಡ ಎ.ಮಾನಯ್ಯ ಮಾತನಾಡಿ, ದಲಿತರು ರಾಜಕೀಯವಾಗಿ ಬೆಂಬಲಿಸಬೇಕಾದಾಗ ಎಚ್ಚರ ವಹಿಸಬೇಕು, ದಲಿತಪರ – ಅಂಬೇಡಕರ್ ಪರ ಹಾಗೂ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವಂತಹ ವ್ಯಕ್ತಿ ಹಾಗೂ ಪಕ್ಷಗಳನ್ನು ಬೆಂಬಲಿಸಬೇಕು ಎಂದರು.

 ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಎಲ್.ಮಾರೆಣ್ಣ, ಎರುಕುಲಸ್ವಾಮಿ, ಸೋಮಶೇಖರ್, ಎಂ.ಸೋಮಶೇಖರ್, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಗೋವಿಂದು, ಉದ್ಯಮಿ ಎಂ.ಜಿ.ಗೌಡ ಮತ್ತಿತರರು ಇದ್ದರು.