Home ಜಿಲ್ಲೆ ಗುರುಭವನ ಸಮಿತಿಯ ಉಸ್ತುವಾರಿ ಕಾರ್ಯದರ್ಶಿ ಆಯ್ಕೆಗೆ ಚುನಾವಣೆ ನಡೆಸುವಂತೆ ಆಗ್ರಹ 

ಗುರುಭವನ ಸಮಿತಿಯ ಉಸ್ತುವಾರಿ ಕಾರ್ಯದರ್ಶಿ ಆಯ್ಕೆಗೆ ಚುನಾವಣೆ ನಡೆಸುವಂತೆ ಆಗ್ರಹ 

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ, ಸೆ 22   ಇಲ್ಲಿನ ಗುರುಭವನ ಸಮಿತಿಯನೂತನ  ಉಸ್ತುವಾರಿ ಕಾರ್ಯದರ್ಶಿ ಆಯ್ಕೆಗೆ ಚುನಾವಣೆ ನಡೆಸುವಂತೆ ವಿವಿಧ ಶಿಕ್ಷಕರ  ಸಂಘಟನೆಗಳ ಪ್ರತಿನಿಧಿಗಳ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಇಒ ಜಗದೀಶ್ ಎಸ್ ಎಸ್, ಅವರಿಗೆ ಮನವಿ ಸಲ್ಲಿಸಿದರು.     

ಗುರುಭವನ ಸಮಿತಿಗೆ 2026- 2031ನೇ    ಅವಧಿಯ ಸಮಿತಿಗೆ ತಾಲೂಕಿನ 13 ಕ್ಲಸ್ಟರುಗಳಿಂದ ತಲಾ ಒಬ್ಬರಂತೆ 13 ನೂತನ ನಿರ್ದೇಶಕರ ಆಯ್ಕೆ ಕಳೆದ ಶನಿವಾರ ಚುನಾವಣೆ ಹಾಗೂ ಕೆಲವೆಡೆ ಅವಿರೋಧ ಆಯ್ಕೆ ಮಾಡಲಾಯಿತು.

 ಮುಂದಿನ ಅವಧಿಯ ಗುರುಭವನ ಸಮಿತಿಯ “ಉಸ್ತುವಾರಿ ಕಾರ್ಯದರ್ಶಿಯ” ಆಯ್ಕೆಯನ್ನು ಅವಿರೋಧವಾಗಿ ಆಯ್ಕೆ ಮಾಡದೇ   ಚುನಾವಣೆ ಮೂಲಕ ಆಯ್ಕೆ ಮಾಡಲು,ಕೂಡಲೇ  ಚುನಾವಣಾ ವೇಳಾಪಟ್ಟಿ  ಪ್ರಕಟಿಸಿ ಆದೇಶ ಹೊರಡಿಸುವಂತೆ ಸಂಘಟನೆಯ ಶಿಕ್ಷಕರು  ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಗುರುಭವನ ಸಮಿತಿಯ ನೂತನವಾಗಿ ನಿರ್ದೇಶಕರಾದ

ಹೆಚ್.ಮೈಲಾರಪ್ಪ,ಗುರು ಬಸವರಾಜ್,ಇಟಗಿ ಮಂಜುನಾಥ,ಮಾಳ್ಗಿ ಸ್ವಾಮಿ,ಕೊಟ್ರೇಶ್,ಕೊಟ್ರೇಶ್ ನಾಯ್ಕ್,ಗುರುಬಸವರಾಜ,ಟಿ ನಾಗರಾಜ,ಎಲ್ ಯಂಕಾ ನಾಯ್ಕ್ ,ವಿ ಪಿ ಶೇಖರ್ 

 ಸಂಘಟನೆಯ ಪದಾಧಿಕಾರಿಗಳ ಎಸ್. ಆಂಜನೇಯ, ಯಂಕಪ್ಪರೆಡ್ಡಿ, ಹಂಪಸಾಗರ ಆನಂದ, ಕೆ ಬಿ ದೀಪಿಕಾ,ಇಟಗಿ ಪ್ರಭಾಕರ, ,  ಕುಪ್ಪಿನಕೇರಿ ಮಲ್ಲಿಕಾರ್ಜುನ ,ಜಜ್ಜೂರಿ ಉಮೇಶ,

 ಜೆ . ಹನುಮ ರೆಡ್ಡಿ, ಭಾಗ್ಯ ನಾಯ್ಕ್, ಕೆ ಹುಸೇನ್ ಸಾಬ್, ವಿ ತಿಮ್ಮಣ್ಣ,ರುದ್ರೇಶ್, ಯು ರಾಮಕೃಷ್ಣ, ಕೊಟ್ರೇಶ,ಜಿ ರವಿ,ಹರೀಶ, ವೈ ಹೊನ್ನಪ್ಪ ಗುರುಭವನ ಸಮಿತಿಯ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಪ್ರಹ್ಲಾದ್ ಇತರರಿದ್ದರು.